ಬುಧವಾರ (02.06.2021)ರಂದು ಉಡುಪಿಯಲ್ಲಿ ಲಭ್ಯ ಲಸಿಕೆಯ ಮಾಹಿತಿ

ನಾಳೆ ಬುಧವಾರ ದಿನಾಂಕ 02.06.2021 ರಂದು ಉಡುಪಿ ಜಿಲ್ಲಾಸ್ಪತ್ರೆಯ ಸಂತ ಸಿಸಿಲಿ ಲಸಿಕಾ ಕೇಂದ್ರದಲ್ಲಿ ನಲವತೈದು ವರ್ಷ ಮೇಲ್ಪಟ್ಟ ನಾಗರಿಕರಿಗೆ ಮಾತ್ರ 250 ಪ್ರಥಮ ಡೋಸ್ ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.​ 

ಮಣಿಪಾಲ ನಗರ ಪ್ರಾಥಮಿಕ ಅರೋಗ್ಯ ಕೇಂದ್ರದ ಮಾಧವ ಕೃಪಾ ಶಾಲೆಯ ಲಸಿಕಾ ಕೇಂದ್ರದಲ್ಲಿ ರಾಜ್ಯ ಸರಕಾರದ  ಫ್ರಂಟ್ ಲೈನ್ ಕಾರ್ಯಕರ್ತರಿಗೆ (18 to 45 age group) ಒಟ್ಟು 400 ಪ್ರಥಮ ಡೋಸ್ ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.​​

ಉಡುಪಿ ಬಿ ಆರ್ ಆಸ್ಪತ್ರೆಯಲ್ಲಿ 250 ಕೋವಿಷೀಲ್ಡ್ ಎರಡನೇ ಡೋಸ್ ಲಸಿಕೆ ವಿತರಣೆ ನಡೆಯಲಿದ್ದು ಪ್ರಥಮ ಡೋಸ್ ತೆಗೆದು ಕೊಂಡು 84 ದಿನ ಆದವರಿಗೆ ಮಾತ್ರ ಅವಕಾಶವಿದೆ.

 ಜಿಲ್ಲೆಯ ಇತರ ಕೇಂದ್ರಗಳಲ್ಲಿ ಪ್ರತ್ಯೇಕ ಮಾದರಿಯಲ್ಲಿ ಲಸಿಕೆ ವಿತರಣೆ ನಡೆಯಲಿದ್ದು ಲಸಿಕೆ ಪಡೆಯಲಿಚ್ಛಿಸುವ ನಾಗರಿಕರು ಮುಂಚಿತವಾಗಿ ಲಸಿಕಾ ಕೇಂದ್ರಗಳಿಗೆ ಫೋನ್ ಮಾಡಿ ಮಾಹಿತಿ ಪಡೆದು ಕಂಡ ನಂತರವೇ ಹೋಗ ಬೇಕು ಎಂದು ಜಿಲ್ಲಾ ಅರೋಗ್ಯ ಇಲಾಖೆಯಮೂಲಗಳು ತಿಳಿಸಿವೆ.​​

 
 
 
 
 
 
 
 
 
 
 

Leave a Reply