ಕೋವಿಡ್ ನಿಯಮ ಕಟ್ಟು ನಿಟ್ಟಾಗಿ ಪಾಲಿಸೋಣ ದೇಶವನ್ನು ಕರೋನಾಮುಕ್ತವಾಗಿಸೋಣ~ರಾಘವೇಂದ್ರ ಪ್ರಭು,ಕವಾ೯ಲು

ಈಗಾಗಲೇ ಕೋವಿಡ್ 2ನೇ ಅಲೆಯು ಜೊರಾಗಿ ಬೀಸುತ್ತಿದೆ.ಈಗಾಗಲೇ ಮೊದಲನೇಯ ಅಲೆಯು ಜನರಿಗೆ ಸಂಕಷ್ಟದ ಪರಿಚಯ ಮಾಡಿಸಿದೆ.ಈ ಮೊದಲು ಪಾಲನೆ ಮಾಡುತ್ತಿದ್ದ ಕೋವಿಡ್ ನಿಯಮಗಳನ್ನು ಜನರು ಮರೆಯಲಾರಂಭಿಸಿದ್ದಾರೆ.ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದರೂ ಅದನ್ನು ಮರೆತಿರುವ ಕಾರಣದಿಂದ ಕರೋನಾ ಸಂಖ್ಯೆ ಹೆಚ್ಚಾಗುತ್ತಿದೆ.

ಮಾಸ್ಕ್ ಜೀವನದ ಅವಿಭಾಜ್ಯ ಅಂಗವಾಗಲಿ :- ಕರೋನಾ ಹತೋಟಿಯಲ್ಲಿ ಮಾಸ್ಕ್ ಬಹಳ ದೊಡ್ದ ಪಾತ್ರ ವಹಿಸುತ್ತದೆ. ಇದನ್ನು ಧರಿಸಲು ಉದಾಸೀನ ಬೇಡ .ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಸಾವ೯ಜನಿಕರಿಗೆ ಅರಿವು ಮೂಡಿಸುವ ಕಾಯ೯ ಮಾಡುತ್ತಿದ್ದಾರೆ.ದಂಡ ವಿಧಿಸುವುದಾಗಿ ಹೇಳಿದರೂ ಕೂಡ ಸಾವ೯ಜನಿಕರು ಈ ಬಗ್ಗೆ ಗಮನ ಹರಿಸದಿರುವುದು ಸರಿಯಲ್ಲ. ಇಂದು ವೈದ್ಯರ ಬಳಿ ತೆರಳುವಾಗ ಮಾತ್ರ ಮಾಸ್ಕ್ ಧರಿಸುದನ್ನು ನಾವು ನೋಡ ಬಹುದು. ಕೇವಲ ವೈದ್ಯರ ಬಳಿ ಮಾತ್ರ ವಲ್ಲ ನಿರಂತರವಾಗಿ ಇದನ್ನು ಧರಿಸಬೇಕಾಗಿದೆ.

ಲಾಕ್ ಡೌನ್ ಬೇಡ: – ಈಗಾಗಲೇ ಲಾಕ್ ಡೌನ್ ನಿಂದ ಜನರು ಎಚ್ಚೆತ್ತುಕೊಳ್ಳುವ ಹಂತದಲ್ಲಿದ್ದಾರೆ. ಮತ್ತೆ ಪುನಃ ಈ ಹಂತವನ್ನು ತರದೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಮಾಡಬೇಕಾಗಿದೆ.
ಜನಪ್ರತಿನಿಧಿಗಳು ಮಾದರಿಯಾಗಲಿ :- ಕೆರೋನಾ ನಿಯಮಗಳನ್ನು ಜಾರಿಗೆ ತರಲು ನಿಯಮಗಳನ್ನು ರೂಪಿಸುವ ಜನಪ್ರತಿನಿಧಿಗಳು ನಿಯಮಗಳನ್ನು ತಾವು ಮೊದಲು ಸರಿಯಾಗಿ ಪಾಲಿಸಬೇಕಾಗಿದೆ. ರಾಜಕೀಯ ಕಾಯ೯ಕ್ರಮಗಳು ಕರೋನಾ ನಿಯಮಗಳನ್ನ ಗಾಳಿಗೆ ತೂರದೆ ಪಾಲನೆ ಮಾಡಲಿ. ಖ್ಯಾತ ಅನಿವಾಸಿ ಭಾರತೀಯ ವೈದ್ಯರಾದ ಡಾII ಮುಕುಂದ ನಾಯಕ್ ರವರ ಅಭಿಪ್ರಾಯದಂತೆ ಕೋರೋಣದಿಂದ ದೂರವಿರಲು ಈ ಕೆಳಗಿನ ನಿಯಮಗಳನ್ನು ಅನುಸರಿಸೋಣ

ಪ್ರಾಮುಖ್ಯ ನಿಯಮಗಳು
1)ಹೊರಗಡೆ ಹೋಗುವಾಗ ಮಾಸ್ಕನ್ನು ಹಾಕುವುದನ್ನು ಮರೆಯಬೇಡಿರಿ. ಮಾಸ್ಕ್ ಇಲ್ಲದೆ ಯಾವ ಅನ್ಯ ವ್ಯಕ್ತಿ ಗಳನ್ನು ಸಂದರ್ಶಸ ಬೇಡಿರಿ. N95 ಮಾಸ್ಕ್ ತುಂಬಾ ಉತ್ತಮ. ಅದು ಅಲಭ್ಯವಿದ್ದರೆ ಸರ್ಜಿಕಲ್ ಮಾಸ್ಕನ್ನೋ ಅಥವಾ ಸಾದಾ ಬಟ್ಟೆಯ ಮಾಸ್ಕನ್ನೋ ಧರಿಸಿರಿ. ಇನ್ನು ಕೆಲವೇ ದಿನಗಳಲ್ಲಿ ಮನೆಯ ಒಳಗಡೆ ಇರುವಾಗಲೂ ಮಾಸ್ಕ್ ಧರಿಸುವ ಕಾಲ ಬರಬಹುದು. ಒಂದೇ ಮಾಸ್ಕನ್ನು ಬಹಳ ಕಾಲ ಉಪಯೋಗಿಸಬೇಡಿರಿ ಬದಲಾವಣೆ ಮಾಡುತ್ತಾ ಇರಿ.

2 ) ಕನಿಷ್ಠ ಎರಡು ಮೀಟರ್ ಅಂತರವನ್ನು ಕಾಪಾಡಿ. ಯಾರಿಗಾದರೂ ಜ್ವರ, ಕೆಮ್ಮು, ಶೀತ ಇದ್ದರೆ ಅವರ ಬಳಿಯೂ ಸುಳಿಯಬೇಡಿ. ಈಗ ಯಾವ ಜ್ವರ ಇದ್ದರೂ ಅದನ್ನು ಕೊರೊನ ಅಂತನೇ ಪರಿಗಣಿಸಬೇಕಾಗುತ್ತದೆ.

3 ) ಮನೆಯಿಂದ ಹೊರಗಡೆ ಇದ್ದರೆ ಕೈ ಗಳನ್ನು ಆಗಾಗ ತೊಳೆಯಿರಿ. ಸಾಬೂನ್ ಉಪಯೋಗಿಸಿದರೆ ಉತ್ತಮ.
ಕನಿಷ್ಠ 20 ಸೆಕೆಂಡ್ ಗಳ ಕಾಲ ತೊಳೆದರೆ ಉತ್ತಮ.

ಇತರೇ ನಿಯಮಗಳು :- 1) ಯಾರ ಕೈಯನ್ನೂ ಕುಲುಕಬೇಡಿರಿ. 2) ಮದುವೆ, ಮುಂಜಿ, ಗ್ರಹ ಪ್ರವೇಶ, ಕೋಲ, ತಂಬಿಲ ಇತ್ಯಾದಿಗಳನ್ನು ಸದ್ಯಕ್ಕೆ ಬದಿಗಿಡಿರಿ. ಎರಡು ವರ್ಷ ಬಿಟ್ಟು ಆಮೇಲೆ ಅವುಗಳ ಬಗ್ಗೆ ಯೋಚಿಸೋಣ. 3) ಲಿಫ್ಟ್ ನ್ನು ಆದಷ್ಟು ಕಡಿಮೆ ಉಪಯೋಗಿಸಿ. ಲಿಫ್ಟ್ ಬಂದ್ ಇರುವ ಕಾರಣ ಅವುಗಳಲ್ಲಿ ಕೊರೊನ ಶೇಖರವಾಗುವ ಸಂಭವ ಇರಬಹುದು.

4) ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಕೈ ಗಳನ್ನು ಚೆನ್ನಾಗಿ ತೊಳೆಯಿರಿ. 5) ಸಾವ೯ಜನಿಕ ಸಾರಿಗೆ ಗಳ ಉಪಯೋಗ ವನ್ನು ಆದಷ್ಟು ಕಮ್ಮಿ ಮಾಡಿ. ಟ್ಯಾಕ್ಸಿಯಲ್ಲಿ ಹೋಗಬೇಕಾದ ಪ್ರಸಂಗ ಬಂದಲ್ಲಿ ಗ್ಲಾಸ್ ಗಳನ್ನು ಕೆಳಗಿನ ಮಟ್ಟಕ್ಕೆ ಇಳಿಸಿ. 6) ಮೂಗು, ಬಾಯಿ ಗಳನ್ನು ಮುಟ್ಟಬೇಡಿರಿ.

7) ಕರೆನ್ಸಿ ನೋಟ್ ಗಳನ್ನು ಕೈಯಿಂದ ಮುಟ್ಟಿದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ. 8)ಶೀತ ಜ್ವರದ ಲಕ್ಷಣ ಗಳು ಕಂಡು ಬಂದರೆ ಕೊರೊನ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಒಂದು ವೇಳೆ ಪೋಸಿಟಿವ್ ಬಂದರೆ ಎರಡು ವಾರ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿ. 9) ಗ್ಲೋವ್ ಮತ್ತು ಸಾನಿ ಟೈಸರ್ ಗಳು ಅಷ್ಟೊಂದು ಪ್ರಯೋಜನವಿಲ್ಲ. ಲಭ್ಯವಿದ್ದರೆ ಉಪಯೋಗಿಸಲೂ ಬಹುದು.

10) ವ್ಯಾಕ್ಸೀನ್ ನ್ನು ಎಲ್ಲರೂ ತೆಗೆದುಕೊಳ್ಳತಕ್ಕದ್ದು. ಒಂದು ವೇಳೆ ಯಾರಿಗಾದರೂ ಮುಂಚೆ ಕೊರೊನ ಬಂದಿ ದ್ದರೆ ಅವರೂ ಸಹ ಲಸಿಕೆಯನ್ನು ತೆಗೆದುಕೊಳ್ಳಬೇಕು. ವ್ಯಾಕ್ಸಿನ್ ತೆಗೆದುಕೊಂಡ ಬಳಿಕವೂ ಮೇಲಿನ ನಿಯಮ ಗಳನ್ನು ಪಾಲಿಸತಕ್ಕದ್ದು. ಆದರೆ ಒಂದು ನೆನಪಿರಲಿ… ಈ ಲಸಿಕೆ ಗಳು ಅಲ್ಪ ಕಾಲ ಮಾತ್ರ ಪರಿಣಾಮ ಕಾರಿ. ಹೆಚ್ಚೆಂದರೆ ಆರೆಂಟು ತಿಂಗಳು ಮಾತ್ರ ಉಪಯೋಗ. ನಂತರ ಬುಸ್ಟರ್ ಡೊಸ್ ತೆಗೆದುಕೊಳ್ಳಬೇಕಾಗಬಹುದು.

ಈ ಎಲ್ಲಾ ನಿಯಮ ಗಳನ್ನು ಪಾಲಿಸಿದರೆ ಕೊರೊನವನ್ನು ಖಂಡಿತವಾಗಿಯೂ ತಡೆಗಟ್ಟಬಹುದು. ಒಟ್ಟಾರೆಯಾಗಿ ಭಾರತವು ಕರೋನಾ ಹತೋಟಿಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಜನರ ಸಹಕಾರವಿಲ್ಲದೆ ಏನೂ ಮಾಡಲು ಅಸಾಧ್ಯ ಹೀಗಾಗಿ ಕರೋನಾ 2 ನೇ ಅಲೆಯು ಹತೋಟಿಗೆ ತರಲು ಪ್ರಯತ್ನಿಸಬೇಕಾಗಿದೆ.

 
 
 
 
 
 
 
 
 
 
 

Leave a Reply