ಉಡುಪಿ ಇಂಡಸ್ಟ್ರೀಯಲ್ ಸೊಸೈಟಿ ವತಿಯಿಂದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಅಭಿನಂದನೆ

ಉಡುಪಿ  ; ಸಹಕಾರಿ ಕ್ಷೇತ್ರದಲ್ಲಿ  ಸಹಕಾರವಿದ್ದಲ್ಲಿ ಸಾಧನೆಯೇ ಗುರಿ ಮುಟ್ಟಲು ಸಾಧ್ಯ ,  ಒಂದು ಸಂಸ್ಥೆ ಉನ್ನತ ಮಟ್ಟಕ್ಕೆ ಏರಲು  ಸಿಬ್ಬಂದಿ ಮುಖ್ಯ , ಸಂಸ್ಥೆ ಗೆ ದೊಡ್ಡ ಕಟ್ಟಡ ಮುಖ್ಯ ಅಲ್ಲ.   ಅದರ ಸಿಬ್ಬಂಧಿ  ಪ್ರಾಮಾಣಿಕವಾಗಿ ಸೇವೆ ನೀಡಿದಾಗ ಸಂಸ್ಥೆ ಅಭಿವೃದ್ಧಿ ಈ ನಿಟ್ಟಿನಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಉತ್ತಮ ಉದಾಹರಣೆ. 
ಉಡುಪಿ ಇಂಡಸ್ಟ್ರೀಯಲ್ ಕೋ , ಆಪರೇಟಿವ್ ಸೊಸೈಟಿ ವತಿಯಿಂದ  ಶನಿವಾರ  ಹೋಟೆಲ್  ಓಷನ್ ಪರ್ಲ್ನ ನಲ್ಲಿ   ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ದ. ಕ  ಹಾಲು ಒಕ್ಕೂಟದ  ಅಧ್ಯಕ್ಷರಾದ  ರವಿರಾಜ್ ಹೆಗ್ದೆ  ಅಭಿನಂದಿಸಿ ಮಾತನಾಡಿದರು .
 
ನೌಕರರು ಪ್ರಾಮಾಣಿಕತೆಯಿಂದ ಸೇವೆ ಕೊಟ್ಟರೆ ತಾವೂ ಹಾಗೂ ತಮ್ಮ ಸಂಸ್ಥೆ ಉನ್ನತ ಮಟ್ಟಕೆ ಏರುವುದನ್ನು ಕಾಣಲೂ ಸಾಧ್ಯ.  ಈ ನಿಟ್ಟಿನಲ್ಲಿ ಹಂತ  ಹಂತವಾಗಿ ಬೆಳೆದು   ಇಂದು ರಾಜ್ಯ ಸಹಕಾರ ಮಹಾ ಮಂಡಲ ನೂತನ ನಿರ್ದೇಶಕರಾಗಿ ಆಯ್ಕೆ ಗೊಂಡ  ಜಯಕರ ಶೆಟ್ಟಿಯವರನ್ನು ಸಂಸ್ಥೆ ಪರವಾಗಿ ಅಭಿನಂದಿಸಿದರು. 
ಅಭಿನಂದನೆ ಸ್ವೀಕರಿಸಿದ  ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ   ಪ್ರಾಮಾಣಿಕತೆ , ಹಾಗೂ ಮನಸಾಕ್ಷಿ ಪೂರ್ವಕ ದುಡಿದಲ್ಲಿ ಅಧಿಕಾರ ನಮ್ಮನರಸಿ  ಬರುತ್ತದೆ ,  ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನೂ ಪರಿಹರಿಸುವು ದಾಗಿ ತಿಳಿಸಿದರು. 
 
ಉಡುಪಿ ಇಂಡಸ್ಟ್ರೀಯಲ್ ಕೋ ,ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ  ಅರುಣಕುಮಾರ ಶೆಟ್ಟಿ ಸ್ವಾಗತಿಸಿದರು.  ಉಪಧ್ಯಕ್ಷರಾದ ಮಟ್ಟಾರ್ ಗಣೇಶ್ ಕಿಣಿ  ವಂದಿಸಿದರು , ಜನರಲ್ ಮೈನೇಜರ್ ರಾಜೇಶ್ ಹೆಗ್ದೆ  ಕಾರ್ಯಕ್ರಮ ನಿರೂಪಣೆಗೈದರು 
 
 
 
 
 
 
 
 
 

Leave a Reply