ಕರ್ಫ್ಯೂ:ಉಡುಪಿ, ಮಣಿಪಾಲದಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿ – ಎಸ್ಪಿ ವಿಷ್ಣುವರ್ಧನ್

ಉಡುಪಿ: ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 10-ರಿಂದ ಏಪ್ರಿಲ್ 20 ರವರೆಗೆ ರಾಜ್ಯದ 8 ನಗರಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ವರೆಗೆ ಜಾರಿಗೆ ಗೊಳಿಸಿರುವ ಕೊರೋನಾ ಕರ್ಪ್ಯೂ ಉಡುಪಿ ನಗರ ಹಾಗೂ ಮಣಿಪಾಲ ದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ಮಾಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ರಾಜ್ಯ ಸರಕಾರ ಉಡುಪಿ ಮತ್ತು ಮತ್ತು ಮಣಿಪಾಲದಲ್ಲಿ ಕೊರೋನಾ ಕರ್ಫ್ಯೂ ಹೇರಿದ್ದು ಎರಡು ನಗರದಲ್ಲಿ ಕೂಡ ಶನಿವಾರದಿಂದ ಬಿಗಿ ಪೊಲೀಸ್ ಬಂದೊಬಸ್ತ್ ಹಾಕಲಾಗುವುದು.

ನಗರದ ಪ್ರಮುಖ ಜಂಕ್ಷನ್ ನಲ್ಲಿ ಚೆಕ್ ಪೋಸ್ಟ್ ಹಾಕಿ, ಮಣಿಪಾಲ ನಗರದಲ್ಲಿ ನೈಟ್ ರೌಂಡ್ಸ್ ಹೆಚ್ಚಿಸುವುದರೊಂದಿಗೆ ಉಡುಪಿಯ ಪ್ರವಾಸಿ ತಾಣಗಳ ಮೇಲೂ ವಿಶೇಷ ಗಮನ ಇಡಲಾಗು ತ್ತದೆ ಎಂದರು.

ಕೊರೋನಾ ಕರ್ಫ್ಯೂ ಹಿನ್ನಲೆಯಲ್ಲಿ ಡಿಎಸ್ ಪಿ ರಾಂಕ್ ಅಧಿಕಾರಿಯನ್ನು ನೋಡೆಲ್ ಆಪೀಸರ್ ಆಗಿ ನೇಮಕ ಮಾಡಲಿದ್ದು ಆ ನೋಡೆಲ್ ಆಫೀಸರ್ ಗೆ ಕೊರೋನಾ ಕರ್ಫ್ಯೂ ಜವಾಬ್ದಾರಿ ನೀಡಲಾಗುವುದು.

ಹೋಟೆಲ್, ರೆಸ್ಟೋರೆಂಟ್ ಕ್ಲಬ್ ಪಬ್ ಸಮಯ ನಿಗದಿ ಮಾಡಲಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಡೆ ವಿಶೇಷ ಗಮನ ಕೊಡಲಾಗು ವುದು.

ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿ ಎರಡು ಜಿಲ್ಲೆಯ ನಿಯಮ ರೂಪಿಸಲಾಗುವುದು ಎಂದು ತಿಳಿಸಿದರು.

 
 
 
 
 
 
 
 
 
 
 

Leave a Reply