WWE ಸೂಪರ್ ಸ್ಟಾರ್ ಸಾರಾ ಲೀ ನಿಧನ

2015ರ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ನ ಸೂಪರ್ ಸ್ಟಾರ್ ವಿನ್ನರ್ ಸಾರಾ ಲೀ (30) ನಿಧನರಾದರು. ಈ ಕುರಿತು ಸಾರಾ ತಾಯಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಕೆಯ ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಡಬ್ಲ್ಯೂಡಬ್ಲ್ಯೂಇಗೆ ನಿವೃತ್ತಿ ಬಳಿಕ ಸಾರಾ ಲೀ ಮೂಗಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಸಾರಾ ಲೀ ಅವರು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ರಿಯಾಲಿಟಿ ಸ್ಪರ್ಧೆಯ ಸರಣಿ ಟಫ್ ಎನಫ್ ಅನ್ನು 2015 ರಲ್ಲಿ ಗೆದ್ದಿದ್ದರು.

 
 
 
 
 
 
 
 
 
 
 

Leave a Reply