Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ

ಮಾಜಿ ಕೇಂದ್ರ ಸಚಿವ ಮತ್ತು ದೇಶದ ಪ್ರಮುಖ ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಶರದ್ ಯಾದವ್ ಗುರುವಾರ ನಿಧನರಾದರು.

75 ವರ್ಷದ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ದೆಹಲಿಯ ತಮ್ಮ ಮನೆಯಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಗುರುಗ್ರಾಮ್‌ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಅವರನ್ನು ತಕ್ಷಣವೇ ಕರೆದೊಯ್ಯಲಾಯಿತು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು.ಪರೀಕ್ಷೆ ಬಳಿಕ‌ ವೈದ್ಯರು ಸಾವನ್ನು ದೃಢಪಡಿಸಿದ್ದಾರೆ‌.

ಹಿರಿಯ ರಾಜಕಾರಣಿ ಮತ್ತು ಜೆಡಿಯು ಮಾಜಿ ಮುಖ್ಯಸ್ಥ ಶರದ್ ಯಾದವ್ ಅವರ ನಿಧನಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಯಾದವ್ ಅವರ ನಿಧನದ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ.ಅವರ ನಿಧನವು “ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ಹೇಳಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!