ಕಾನೂನು ಬದ್ಧವಾಗಿ ಆಯುರ್ವೇದ ಶಸ್ತ್ರ ಚಿಕಿತ್ಸೆಗೆ ಅನುಮತಿ ನೀಡಿದ ಸರ್ಕಾರ

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿದೆ. ಸ್ನಾತಕೋತ್ತರ ಪದವಿ ಪಡೆದ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನೀಡಲು ಅನುಮತಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಕುರಿತು ಮಾತನಾಡಿದ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧ್ಯಕ್ಷರು, ಆಯುರ್ವೇದ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ 25 ವರ್ಷಗಳಿಂದ ಈ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ಈ ಅಧಿಸೂಚನೆಯು ಕೇವಲ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಕೇಂದ್ರ ತನ್ನ ಈ ಅಧಿಸೂಚನೆಯಲ್ಲಿ ಕಾನೂನುಬದ್ಧವಾಗಿ ವಿವಿಧ ಸಾಮಾನ್ಯ ಶಸ್ತ್ರಚಿಕಿತ್ಸೆ,ಇಎನ್‌ಟಿ, ನೇತ್ರವಿಜ್ಞಾನ, ಆರ್ಥೋ ಮತ್ತು ದಂತ ಶಸ್ತ್ರಚಿಕಿತ್ಸೆ ತರಬೇತಿ ಪಡೆದ ನಂತರ ಆಯುರ್ವೇದ ವೈದ್ಯರು ಕೂಡ ಶಸ್ತ್ರಚಿಕಿತ್ಸೆ ಮಾಡಬಹುದು ಎಂಬ ಆದೇಶ ಹೊರತಂದಿದೆ. ಗಜೆಟ್ ಅಧಿಸೂಚನೆ ಪ್ರಕಾರ 39 ಜನರಲ್ ಸರ್ಜರಿಗಳು ಇಎನ್’ಟಿ, ವಿವಿಧ ರೀತಿಯ 19 ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಆಯುರ್ವೇದ ವೈದ್ಯರು ಅರ್ಹರಾಗಿರುತ್ತಾರೆ.

ಇನ್ನು ಶಲ್ಯ ತಂತ್ರ ಮತ್ತಿ ಶಾಲಾಕ್ಯ ತಂತ್ರದ ಸ್ನಾತಕೋತ್ತರ ಪದವಿ ಮಾಡಿ, ನಿರ್ವಹಿಸಬಲ್ಲವರಿಗಷ್ಟೇ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರ್ಣಗೊಳಿಸಿದ ನಂತರ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಅವಕಾಶ ಒದಗಿಸಲಾಗಿದೆ.

 
 
 
 
 
 
 
 
 
 
 

Leave a Reply