ವಾಸುದೇವ ಕೃಪಾ ಶಾಲಾ ವಾರ್ಷಿಕೋತ್ಸವ

‘ಅಕ್ಷರಂ ಬ್ರಹ್ಮಾಸಿ’ ಎಂದರೆ ‘ಅಕ್ಷರವೇ ದೇವರು’.ಯಾರು ಅದನ್ನ ಹೇಳಿಕೊಡುತ್ತಾರೆ, ಅವರು ದೇವರಿಗೆ ಸಮಾನ, ಶಿಕ್ಷಕರು ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿ. ಶಿಕ್ಷಣಕ್ಕಿರುವ ಮಹತ್ವ ಬೇರೆ ಯಾವ ಚಟುವಟಿಕೆಗೂ ಇಲ್ಲ. ನಮ್ಮ ಜೀವನದ ಮೊದಲ 25 ವರ್ಷಗಳು ಏನು ಮಾಡುತ್ತೇವೆ, ಅದೇ ನಮ್ಮ ಮುಂದಿನ 75 ವರ್ಷ ನಾವು ಪಾಲಿಸಿಕೊಂಡು ಹೋಗುತ್ತೇವೆ ಆ ಕಾರಣ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ತಿಲಿಹೇಳಬೇಕು  ಎಂದು   ವಿದ್ಯಾವಂತ ಆಚಾರ್ಯ ( ಡೈರೆಕ್ಟರ್ ಆಫ್ S.R S) ಅವರು ವಾಸುದೇವ ಕೃಪಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ ಬೈಲೂರು ಉಡುಪಿ ಇಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ನೆರೆದ ಸಭಿಕರನ್ನು ಕುರಿತು ಮಾತನಾಡಿದರು.
ವಾಸುದೇವ ಕೃಪಾ ವಿದ್ಯಾ ಮಂದಿರ ಶಾಲೆಯ ವಾರ್ಷಿಕೋತ್ಸವವು ಎಲ್ಲರ ಸಹಕಾರದೊಂದಿಗೆ ವಿಜೃಂಭಣೆ ಯಿಂದ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಕೆ .ಅಣ್ಣಪ್ಪ ಶೆಣೈ,  P.T.A ಅಧ್ಯಕ್ಷರಾದ ಶ್ರೀ ಮಿಥುನ್ ಮನೋಹರ್ ಶೆಣೈ, ಮುಖ್ಯ ಶಿಕ್ಷಕಿ ಅಕ್ಷತಾ ಅವಿನಾಶ್ ಕಾಮತ್, ಶಾಲಾ ವಿದ್ಯಾರ್ಥಿ ನಾಯಕ ವಂಶ್ ವೇದಿಕೆಯಲ್ಲಿ  ಉಪಸ್ಥಿತರಿದ್ದರು. 
ಚಿತ್ರಾ ಪುರಂದರ್ ಬಂದಂತಹ ಅತಿಥಿಗಳಿಗೆ ಸ್ವಾಗತವನ್ನು ಕೋರಿದರು, ಶ್ರೀಮತಿ ಶೈಲಜಾ ಶೆಟ್ಟಿ ಮುಖ್ಯ ಅತಿಥಿಗಳ ಜೀವನದ ಸಾಧನೆಯನ್ನು ಓದಿದರು, ಮುಖ್ಯ ಶಿಕ್ಷಕಿ ಅಕ್ಷತಾ ಅವಿನಾಶ ಕಾಮತ್ 2022 ಹಾಗೂ 23ರ ಶಾಲಾ ಮಕ್ಕಳ ಮತ್ತು ಶಿಕ್ಷಕರ ಸಾಧನೆಯ ವರದಿ ವಾಚಿಸಿದರು. ದಿವ್ಯ ಕುಡ್ವ ಎಲ್ಲರಿಗೂ ಧನ್ಯವಾದ ವಿತ್ತರು 
 
 
 
 
 
 
 
 
 
 
 

Leave a Reply