ಕಛೇರಿ ಸಿಬ್ಬಂದಿಗೆ ಕಾಲೇಜಿನ ಸ್ಟಾಫ್ ಕ್ಲಬ್ ವತಿಯಿಂದ ಬೀಳ್ಕೊಡುಗೆ

ಉಡುಪಿ: ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆಸಲ್ಲಿಸುತ್ತಿದ್ದ ಕಛೇರಿ ಸಿಬ್ಬಂದಿ ಚಂದ್ರಹಾಸ ಶೆಟ್ಟಿ ಯವರಿಗೆ ಕಾಲೇಜಿನ ಸ್ಟಾಫ್ ಕ್ಲಬ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ನೆರೆವೇರಿಸಲಾಯಿತು. 

35 ವರ್ಷಗಳಿಗೂ ಅಧಿಕ ಕಛೇರಿ ಸಿಬ್ಬಂದಿಯಾಗಿ ಮಂಗಳೂರಿನ ಪ್ರಾದೇಶಿಕ ಜಂಟಿನಿರ್ದೇಶಕರ ಕಛೇರಿ,ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಹಾಗೂ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವರು ಸೇವೆಸಲ್ಲಿಸಿರುತ್ತಾರೆ.

ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದು, ಸ್ಟಾಫ್ ಕ್ಲಬ್‌ನ ಕಾರ್ಯದರ್ಶಿ ಶ್ರೀ.ರಮಾಕಾಂತ ಪುರಾಣಿಕ್‌ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್ ಕುಮಾರ್ ಜಿ ಇವರು ನಿವೃತ್ತಿ ಹೊಂದುತ್ತಿರುವ ಶ್ರೀ.ಚಂದ್ರಹಾಸ ಶೆಟ್ಟಿಯ ಕಿರುಪರಿಚಯ ಮಾಡಿದರು. ಹಿರಿಯ ಉಪನ್ಯಾಸಕರಾದ ರಾಮಚಂದ್ರ ಅಡಿಗ ಜಿ, ಗೌರಿ ಎಸ್ ಭಟ್, ಐಕ್ಯೂಎಸಿಯ ಸಂಚಾಲಕ ಶ್ರೀ. ಸೋಜನ್ ಕೆ.ಜಿ ಹಾಗೂ ಕಛೇರಿ ವ್ಯವಸ್ಥಾಪಕಿ ಶ್ರೀಮತಿ. ಸುಧಾ ಎಸ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply