ಯುಪಿಎಂಸಿ ಪ್ರಥಮ ಪದವಿ ತರಗತಿ ಪ್ರಾರಂಭ

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2022-23 ನೇ ಸಾಲಿನ ಪ್ರಥಮ ಬಿ.ಕಾಂ, ಬಿಬಿಎ ತರಗತಿಗಳ ಪ್ರಾರಂಭೋತ್ಸವ ಆಗಸ್ಟ್ 17 ರಂದು ನಡೆಯಿತು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಡಾ.ಟಿ.ಎಂ.ಎ ಪೈ ಪ್ರತಿಷ್ಠಾನದ ಬಗೆಗೆ ಹಾಗೂ ಸಂಸ್ಥಾಪಕರಾದ ಶ್ರೀ ಉಪೇಂದ್ರ ಪೈ, ಶ್ರೀ ಮಾಧವ ಪೈ ಗಳವರ ಪರಿಚಯವನ್ನು ಮಾಡಿಸಿ ಕಾಲೇಜು ಬೆಳೆದು ಬಂದ ದಾರಿಯ ವಿವರಣೆಯೊಂದಿಗೆ ಕಾಲೇಜಿನ ನೀತಿನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಕು.ಇಂದಿರಾ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸಿ ಪ್ರಥಮ ಪದವಿ ತರಗತಿಗಳ ಎರಡೂ ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಕಲಿಯಬೇಕಾದ ವಿಷಯಗಳು, ಆಯ್ಕೆ ವಿಷಯಗಳು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರವಾಗಿ ಅಂಕಗಳ ಮಾನದಂಡದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಉಪಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಉಪಸ್ಥಿತರಿದ್ದರು.
ತೃತೀಯ ಬಿ.ಕಾಂ ನ ವಿದ್ಯಾರ್ಥಿನಿ ನಿಯತಿ ಕಾಮತ್ ಪ್ರಾರ್ಥಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಜೇಶ್ ಕುಮಾರ್ ಧನ್ಯವಾದ ಇತ್ತರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply