ಶ್ರೀ ದೇವಿಯ ಆವರಣದಲ್ಲಿ ನಡೆಸುವ ಕಾರ್ಯಾಗಾರಗಳು ಅದ್ಭುತ ಪರಿಣಾಮವನ್ನುಂಟು ಮಾಡುತ್ತವೆ.~ ಡಾ. ನಿ.ಬಿ.ವಿಜಯ ಬಲ್ಲಾಳ

ರೋಟರಿ ವಲಯ 4ರ ಸುಮಾರು 20 ಕ್ಲಬ್ ಗಳ ಇಂಟರಾಕ್ಟ ಸದಸ್ಯ ರಿಗೆ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಒಂದು ದಿವಸದ ಬೌತಿಕ ವಿಕಸನ ಕಾರ್ಯಗಾರ ನಡೆಸಲಾಯ್ತು ಬೆಳಿಗ್ಯೆ ಉದ್ಘಾಟನಾ ಕಾರ್ಯ ಕ್ರಮದಲ್ಲಿ ದರ್ಮದರ್ಶಿ ಶ್ರೀ ಡಾ. ನಿ.ಬಿ.ವಿಜಯ ಬಲ್ಲಾಳರು ಮಾತಾಡುತ್ತಾ ಶ್ರೀ ದೇವಿಯ ಆವರಣದಲ್ಲಿ ಮಕ್ಕಳಿಗೆ ನಡೆಸುವ ಇಂತಹ ಕಾರ್ಯಾಗಾರಗಳು ಅದ್ಭುತ ಪರಿಣಾಮವನ್ನುಂಟು ಮಾಡುತ್ತವೆ.

 

ಜಗತ್ತಿನಲ್ಲಿ ಪೋಲಿಯೊ ನಿರ್ಮೂಲನೆ ಯಲ್ಲಿ ಮಹತ್ವದ ಪಾತ್ರ ವಹಿಸಿದ ರೋಟರಿಯು ವಿದ್ಯಾರ್ಥಿಗಳಿಗೆ ಉಪಯುಕ್ತ ವಾದ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಅಭಿನಂದನೀಯ ಮತ್ತು ಇದರ ಸಂಪೂರ್ಣ ಉಪಯೋಗ ಪಡೆಯಿರೆಂದು ಕರೆನೀಡಿ ರೋಟರಿ ಈ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಪ್ರಾರಂಬದಲ್ಲಿ ರೋಟರಿ ಅಧ್ಯಕ್ಷ ರೋ.ಸುಬ್ರಹ್ಮಣ್ಯ ಕಾರಂತರು ಸ್ವಾಗತಿಸಿದರು.

ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ರೋ.ಗುರುರಾಜ್ ಭಟ್ ರು ದನ್ಯವಾದ ಸಮರ್ಪಿಸಿದರು. ಸಂಪನ್ಮೂಲ ಅತಿಥಿಗಳಾಗಿ ಡಯಟ್ ನ ಉಪಪ್ರಾಂಶುಪಾಲ ಡಾ.ಅಶೋಕ ಕಾಮತ್, ಕೆಎಂಸಿ ಮಣಿಪಾಲ ದ ಡಾ. ಅಶ್ವಿನಿಕುಮಾರ್, ಡಯಟ್ ನ ಪ್ರಾಧ್ಯಾಪಕ ಶ್ರೀ ಯೋಗನರಸಿಂಹ, ಮನಶಾಸ್ತ್ರಜ್ಞ ಡಾ.ವಿರೂಪಾಕ್ಷ ದೇವರಮನೆ, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಶ್ರೀ ನರೇಂದ್ರ ಕುಮಾರ್ ಅವರುಗಳು ಸಹಕರಿಸಿದ್ದರು.

ರೋ. ಅನಂತರಾಮ ಬಲ್ಲಾಳ ರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಯುವಸೇವಾ ನಿರ್ದೇಶಕ ರೋ.ಜನಾರ್ದನ ಭಟ್, ಇಂಟರಾಕ್ಟ ಸಭಾಪತಿ ರೋ. ಪದ್ಮಿನಿ ಭಟ್ ಮತ್ತು ಇತರ ರೋಟರಿ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply