ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು – ಸಿಎ ಪರೀಕ್ಷೆಯಲ್ಲಿ ದಾಖಲೆಯ ಸಾಧನೆ

ಚಾರ್ಟರ್ಡ್‌ ಅಕೌಂಟೆಂಟ್‌ ಆಫ್‌ ಇಂಡಿಯಾ ಇದರ ವತಿಯಿಂದ 2021-22ನೇ ಸಾಲಿನಲ್ಲಿ ನಡೆದ ಸಿಎ ಪೌಂಡೇಶನ್‌ ಮತ್ತು ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು 76% ಫಲಿತಾಂಶದೊಂದಿಗೆ ದಾಖಲೆ ಸಾಧನೆ ಮಾಡಿದೆ.

ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಸಮೀರ್‌ ಆಚಾರ್ಯ, ಅರುಣಾಚಲ್‌, ಪುನೀತ, ವಿಷ್ಣು, ಶ್ರೇಯ, ರಾಹುಲ್‌, ಶ್ರೀಲಕ್ಷಿ ಗೌತಮಿ, ಕಾವ್ಯಶ್ರೀ, ಮೆಹನಾಜ್‌, ಶೈವಿ ಶೆಟ್ಟಿ, ಕೀರ್ತನ್‌ ಮಿಶೆಲ್‌, ರಚನಾ, ಎಲಿಸ್ಟರ್‌, ಶಿಫ್ನತ್‌ ಹಾಗೂ ಸಿಎ ಪೌಂಡೇಶನ್‌ ಪರೀಕ್ಷೆಯಲ್ಲಿ ಪ್ರಜ್ಞಾ, ಸ್ನಿಗ್ಧ ಇವರು ಉತ್ಕೃಷ್ಟ ಸಾಧನೆ ಮಾಡಿರುತ್ತಾರೆ.

ಈ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ತೀರ್ಥ ಶ್ರೀಪಾದರು, ಗೌರವ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply