ಕೊಡವೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಶ್ರೀ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಸಂಘದ ಅಧ್ಯಕ್ಷ ಪ್ರಸಾದ್‌ ಕೆ.ಟಿ ಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರಗಿತು. ಒಕ್ಕೂಟದ ಅಧ್ಯಕ್ಷರು ಸಂಘದ ಮಾಜಿ ಅಧ್ಯಕ್ಷ ಪ್ರಸ್ತುತ ನಿರ್ದೇಶಕರಾಗಿ ಸಂಘಕ್ಕೆ ಮಾರ್ಗದರ್ಶಿಯಾಗಿರುವ ಶ್ರೀ ರವಿರಾಜ ಹೆಗ್ಡೆಯವರು ಪ್ರಾಸ್ತಾವಿಕ ಮಾತನಾಡಿ ಮಾಡಿ ಸಂಘವು ಬೆಳೆದು ಬಂದ ವಿಷಯ, ಸಂಘದ ಸದಸ್ಯರಿಗೆ ನೀಡುವ ಹಲವಾರು ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಲೆಕ್ಕ ಪರಿಶೋಧಯಲ್ಲಿ’ ಎ’ ತರಗತಿ ಹಾಗೂ ಕೊರೊನಾ ಸಮಯದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಕಾರ್ಯದರ್ಶಿ ಸಂತೋಷ ರವರು, ಸಂಘದ ಅಧ್ಯಕ್ಷರು, ಆಡಳಿತ ಸದಸ್ಯರು, ಒಕ್ಕೂಟದ ಸಹಾಯಕ ವ್ಯವಸ್ಥಾಪಕರನ್ನು ಹಾಗೂ ಎಲ್ಲಾ ಸದಸ್ಯ ರನ್ನು ಸ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.  
ಸಂಘವು 2020-21ನೇ ಸಾಲಿನಲ್ಲಿ ನಿವ್ವಳ  ಲಾಭ 6,99,083.61 ರೂಪಾಯಿಗಳಿಸಿದ್ದು ಉತ್ಪಾದಕರಿಗೆ ಬೋನಸ್‌ ರೂ. 3,33,988. 09ನ್ನು ನೀಡಲಾಯಿತು.   ಜತೆಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ 179 ಉತ್ಪಾದಕರಿಗೆ ಉತ್ತೇಜನ ಬಹುಮಾನ ನೀಡಲಾಯಿತು.
ಸದಸ್ಯರಿಗೆ 15% ಡಿವಿಡೆಂಡ್‌ ನೀಡಲಾಯಿತು. ಸದಸ್ಯರ 14 ಮಂದಿ ಮಕ್ಕಳಿಗೆ ವಿದ್ಯಾರ್ಥಿ ಉತ್ತೇಜನ ಕೊಡುಗೆಯನ್ನು ಹಾಗೂ ಮರಣ ಹೊಂದಿದ ಸದಸ್ಯರ ಮನೆಯವರಿಗೆ ಧನಾತ್ಮಕ ಬೆಂಬಲ ನೀಡಲಾಯಿತು. ಸಂಘದ ವತಿಯಿಂದ ಹಾಲು ಉತ್ಪಾದಕರಿಗೆ 6 ತಿಂಗಳು ಹೆಚ್ಚುವರಿಯಾಗಿ ಲೀಟರಿಗೆ 2 ರೂಪಾಯಿಯನ್ನು ನೀಡಿಲಾಗಿದೆ. ಅವಘಡಕ್ಕೆ ತುತ್ತಾದ ರಾಸುಗಳಿಗೆ ಒಬ್ಬರಿಗೆ ರೂ. 2,009 ದಂತೆ 5 ಮಂದಿಗೆ ಸಹಾಯ ಧನ ಸಂಘದ ಪತಿಯಿಂದ ನೀಡಲಾಯಿತ್ತು. 
ಒಕ್ಕೂಟದ ಮುಖಾಂತರ 232 ಜಾನುವಾರುಗಳಿಗೆ ಜಾನುವಾರು ವಿಮೆ ಮಾಡಿಸಿ, ಆ ವಿಮೆಯ ಮೂಲಕ 4 ಮಂದಿಯ ಜಾನುವಾರು ಮರಣ ಹೊಂದಿದಕ್ಕೆ ತಲಾ ರೂ.40,000,30,000, 25,009, 25,900 ದಂತೆ ಅವರವರ ಖಾತೆಗೆ ಬಂದಿರುವ ಬಗ್ಗೆ ಮಾಹಿತಿ ನೀಡಲಾಯಿತು. ಒಕ್ಕೂಟದ ರೈತರ ಕಲ್ಯಾಣ ನಿಧಿಯಿಂದ ಸಂಘದ ಸದಸ್ಯರಿಗೆ ರೂ.23,000.0 ಹಾಗೂ ರಬ್ಬರ್‌ ಮ್ಯಾಟ್‌ಗೆ 3 ಮು೦ದಿಗೆ ತಲಾ ರೂ.2,400 ರ ತೆ ರೂ.7,200 ಅನುದಾನ ಬಂದ ಬಗ್ಗೆ ಮಾಹಿತಿ ನೀಡಲಾಯಿತು.

ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಶಂಕರ ನಾಯ್ಕ್‌ ಮಾತಾಡಿ ಸಂಘವು ಪಾರದರ್ಶಕವಾಗಿ ಕೆಲಸ ಮಾಡುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಒಕ್ಕೂಟದಿಂದ ಸದಸ್ಯರಿಗೆ ಸಿಗುವ ಸವಲತ್ತಿನ ಬಗ್ಗೆ ತಿಳಿಸಿದರು.  ಪಶುವೈದ್ಯರಾದ ಮಹೇಶ್ವರಪ್ಪ ನವರು ರಾಸುಗಳಿಗೆ ಬರುವ ರೋಗ, ಮುತ್ತು ರೋಗ ತಡೆಗಟ್ಟುವ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. 

ಸಂಘದ ನಿರ್ದೇಶಕರಾದ ಬಿ. ಗೋಪಾಲ ಶೆಟ್ಟಿ,  ಗಣೇಶ ಪೂಜಾರಿ, ರಾಜ ಶೇರಿಗಾರ, ಇಂದಿರಾ ಶೆಡ್ತಿ, ಸದಾನಂದ ಶೇರಿಗಾರ, ಇಂದಿರಾ ಭಾದ್ಯ, ಸರಸ್ವತಿ, ಅಣ್ಣಪ್ಪ ಶೆಟ್ಟಿ, ಲೀಲಾ ಎಂ.,  ಜಯಂತಿ, ಸಿಬ್ಬಂದಿಗಳಾದ ಸುಮಿತ್ರ, ಸುಧಾ, ಸುಜಯ ಉಪಸ್ಥಿತರಿದ್ದರು. ಸಂಘದ ಅಂತರಿಕ ಲೆಕ್ಕ ಪರಿಶೋಧಕ  ರಾಮ ಶೇರಿಗಾರ ಕಾರ್ಯಕ್ರಮ ನಿರ್ವಹಿಸಿದರು.
 
 
 
 
 
 
 
 
 
 
 

Leave a Reply