ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾರ್ಷಿಕ ಸಂಚಿಕೆ ‘ಸಂಧ್ಯಾ ರಶ್ಮಿ’ ಅನಾವರಣ ಕಾರ್ಯಕ್ರಮ

​​“ಸಾಯಂ ಸಂಧ್ಯಾ ಕಾಲದ ‘ ಸಂಧ್ಯಾ ರಶ್ಮಿ’ ಹೇಗೆ ದೈಹಿಕ ಆರೋಗ್ಯಕಾರಕವೋ ಹಾಗೆಯೇ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ “ಸಂಧ್ಯಾ ರಶ್ಮಿ” ವಿದ್ಯಾರ್ಥಿಗಳ ಮಾನಸಿಕ, ಬೌದ್ಧಿಕತೆಗೆ ಆರೋಗ್ಯಕಾರಕವಾಗಿದೆ. ಸಂಚಿಕೆಯಲ್ಲಿರುವ ಪ್ರತಿಯೊಂದು ಲೇಖನವೂ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದೊಂದಿಗೆ ಸಂದೇಶವನ್ನು ನೀಡುತ್ತಿದೆ. 
ಕಾಲೇಜಿನ ವಾರ್ಷಿಕ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ದಾಖಲೀಕರಿಸುವ ಜೊತೆಗೆ ವಿದ್ಯಾರ್ಥಿ ಗಳ ಸೃಜನಶೀಲ ಬರವಣಿಗೆಗೆ ಸಂಚಿಕೆ ವೇದಿಕೆ” ಆಗಲಿ ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು. ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾರ್ಷಿಕ ಸಂಚಿಕೆ “ಸಂಧ್ಯಾ ರಶ್ಮಿ”ಯನ್ನು ಅನಾವರಣಗೊಳಿಸಿ ಶ್ರೀಪಾದರು ಆಶೀರ್ವಚಿಸಿದರು.
ಆಶಯ ಭಾಷಣಕಾರರಾಗಿ ಆಹ್ವಾನಿತರಾದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ  ಡಾ| ಅರುಣ ಕುಮಾರ್ ಎಸ್.ಆರ್. ಮಾತನಾಡುತ್ತಾ “ಶಿಕ್ಷಣ ಸಂಸ್ಥೆಗಳು ಕೇವಲ ನಿಗದಿತ ಪಠ್ಯವನ್ನು ಬೋಧಿಸುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ, ವ್ಯಕ್ತಿತ್ವ ರೂಪಣೆಗೆ ಪೂರಕವಾಗಿ, ಜೀವನವನ್ನು ಮುನ್ನಡೆಸುವ ಸಾಮರ್ಥ್ಯದ ಮಾರ್ಗದರ್ಶಿ ಸೂತ್ರವನ್ನು ಕಲಿಸುತ್ತದೆ. 
ಒಂದು ಒಳ್ಳೆಯ ವಿದ್ಯಾಸಂಸ್ಥೆ ಒಳ್ಳೆಯ ವಿದ್ಯಾರ್ಥಿಯನ್ನು ಸಮಾಜಕ್ಕೆ ನೀಡಬಲ್ಲದು. ಈ ನಿಟ್ಟಿನಲ್ಲಿ ವಾರ್ಷಿಕ ಸಂಚಿಕೆಯು ವಿದ್ಯಾರ್ಥಿಗಳ ಬರವಣಿಗೆಗೆ, ಅರಿವಿನ, ತಿಳಿವಿನ ವಿಕಾಸಕ್ಕೆ  ಅಡಿಪಾಯ ಹಾಕಿಕೊಡುತ್ತದೆ. ಇದನ್ನು ಸರಿಯಾದ ರೀತಿ ಯಲ್ಲಿ ವಿದ್ಯಾರ್ಥಿಗಳು ಬಳಸಿ ಕೊಳ್ಳುವುದು ಮುಖ್ಯ” ಎಂದು ಹೇಳಿದರು. 
ನ್ಯಾಯವಾದಿ, ಎಸ್.ಪಿ.ಇ.ಸಿ. ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಪ್ರದೀಪ್ ಕುಮಾರ್ ಮಾತನಾಡುತ್ತಾ “ಭಾರತ ಸ್ವಾತಂತ್ರ್ಯವನ್ನು ಪಡೆಯುವಲ್ಲಿ, ಕರ್ನಾಟಕದ ಏಕೀಕ ರಣ ಚಳವಳಿಗಳಲ್ಲಿ ಹೇಗೆ ನಾಡಿನ ಸಾಹಿತಿಗಳು, ಚಿಂತಕರು ತಮ್ಮ ಸೃಜನಶೀಲ ಬರಹಗಳಿಂದ ಜನಜಾಗೃತಿಯನ್ನು ಮೂಡಿಸಿದರೋ ಹಾಗೆ ನಮ್ಮ ವಿದ್ಯಾರ್ಥಿಗಳು ಭಾರತವನ್ನು ವಿಶ್ವಗುರು ವನ್ನಾಗಿಸಲು ತಮ್ಮ ಮೊನಚಾದ ಬರವಣಿಗೆಯಿಂದ ನಿದ್ರಿಸಿದ ಜನರನ್ನು ಎಚ್ಚರಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. 
ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಂತಹ ಸಂತರನ್ನು, ಲಾಲಾಜಿ ಮೆಂಡನ್‌ರಂತಹ ಸಜ್ಜನ ರಾಜಕಾರಣಿ, ಅನೇಕ ಸಾಂಸ್ಕೃತಿಕ, ಸಾಮಾಜಿಕ ಸೇವಾ ರಾಯ ಭಾರಿಗಳನ್ನು ನೀಡಿದ ಕೀರ್ತಿ ನಮ್ಮ ಸಂಧ್ಯಾ ಕಾಲೇಜಿಗೆ ಇದೆ” ಎಂದು ಹೇಳಿದರು.
ಸಂಚಿಕೆಯ ಪ್ರಧಾನ ಸಂಪಾದಕರೂ, ಕಾಲೇಜಿನ ಪ್ರಾಚಾರ್ಯರೂ ಆದ ಡಾ. ಸುಕನ್ಯಾ ಮೇರಿ ಜೆ. ಅಧ್ಯಕ್ಷೀಯ ಮಾತುಗಳೊಂದಿಗೆ ಅಭಿನಂದಿಸಿದರು. ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕ, ಕನ್ನಡ ಉಪನ್ಯಾಸಕ ಶ್ರೀ ರಮಾನಂದ ರಾವ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಸಹ ಸಂಪಾದಕಿ, ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಲತಾ ಆಚಾರ್ಯ ನಿರೂಪಿಸಿದರು. ಸಹ ಸಂಪಾದಕ ಸಂಸ್ಕೃತ ಉಪನ್ಯಾಸಕ ಡಾ. ರಾಮಕೃಷ್ಣ ಉಡುಪ ವಂದಿಸಿದರು. ಕು. ಸುಮನ ಹಾಗೂ ಕು. ಪ್ರತೀಕ್ಷಾ ಮಧ್ಯಸ್ಥ ಪ್ರಾರ್ಥಿಸಿದರು.
 
 
 
 
 
 
 
 
 
 
 

Leave a Reply