ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಎರಡು ದಿನಗಳ ‘ಎಂ.ಜಿ.ಎಂ. ಪುಸ್ತಕೋತ್ಸವ’ :

ಉಡುಪಿ ಎಂ.ಜಿ.ಎಂ ಕಾಲೇಜಿನ ಗ್ರಂಥಾಲಯದ ಆಶ್ರಯದಲ್ಲಿ ಮಾಚ್೯ 5 ಮತ್ತು 6 ರಂದು ಎರಡು ದಿನಗಳ ಕಾಲ ಬೃಹತ್ ಪುಸ್ತಕ ಪ್ರದರ್ಶನ ಹಾಗೂ ಮಾರಾಟ  ‘ಎಂಜಿಎಂ ಪುಸ್ತಕೋತ್ಸವ’ವು  ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ  ಬೆಳಿಗ್ಗೆ 9ರಿಂದ ರಾತ್ರಿ 7.30ರ ತನಕ ನಡೆಯಲಿದೆ. 
ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಸಾಹಿತಿ ಡಾ.ದೇವಿದಾಸ್ ಎಸ್. ನಾಯ್ಕ್ ಹಾಗೂ ಗ್ರಂಥಪಾಲಕರಾದ ಕಿಶೋರ್ ಎಚ್.ವಿ. ಇವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬೃಹತ್ ಪುಸ್ತಕ ಮೇಳದಲ್ಲಿ ನವಕರ್ನಾಟಕ, ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಭಾರತ್ ಬುಕ್ ಮಾರ್ಕ್, ಬಿಬ್ಲಿ ಯೋಸ್, ಸ್ಕೂಲ್ ಬುಕ್ ಕಂಪೆನಿ ಸೇರಿದಂತೆ ವಿವಿಧ ಪುಸ್ತಕ ಮಾರಾಟ ಮಳಿಗೆಗಳು ಎರಡು ದಿನಗಳ ಕಾಲ  ಆಸಕ್ತ ಸಾರ್ವಜನಿಕರಿಗೆ ಪುಸ್ತಕಾಭಿಮಾನಿಗಳಿಗೆ ಮುಕ್ತ ಅವಕಾಶ ನೀಡಿವೆ. 
ಶಾಲೆ ಕಾಲೇಜುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳು ಲಭ್ಯವಿದ್ದು, ಇದರ ಸದುಪಯೋಗವನ್ನು ಎಲ್ಲರೂ ಮಾಡಿಕೊಳ್ಳಿ. ಎಂ.ಜಿ.ಎಂ ಕಾಲೇಜಿನ ಸಾಹಿತಿ ಉಪನ್ಯಾಸಕರ ಕೃತಿಗಳೂ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯ ಇವೆ.
 
 
 
 
 
 
 
 
 
 
 

Leave a Reply