ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದಿರುಸುವುದು ಹೇಗೆ..? 

ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದಿರುಸುವುದು ಹೇಗೆ..? ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ಸರಕಾರಿ ಪಿಯು ಕಾಲೇಜಿನಲ್ಲಿ ( ಬೋರ್ಡ್ ಹೈ ಸ್ಕೂಲ್ ) ಶುಕ್ರವಾರದಂದು ನಡೆಯಿತು. 
ಖ್ಯಾತ ಸಂಪನ್ಮೂಲ ವ್ಯಕ್ತಿ ರೊಟೇರಿಯನ್ ಅಬ್ದುಲ್ ರಹೆಮಾನ್ ವಿದ್ಯಾರ್ಥಿಗಳಿಗೆ   ಎಸ್.ಎಸ್.ಎಲ್.ಸಿ. ಓದುತ್ತಿರುವ ನೀವು ಬುದ್ಧಿವಂತರೂ, ಸತತ ಶ್ರಮಪಟ್ಟು ಓದುವವರೂ, ಶಾಲೆಯಲ್ಲಿ ಕೇಳಿದ ಪಾಠವನ್ನು ಮನನ ಮಾಡಿಕೊಳ್ಳುವ ಚುರುಕುಮತಿಗಳಾಗಿದ್ದರೂ ಎಲ್ಲೋ ಒಂದು ಕಡೆ ನಿಮ್ಮನ್ನು ಭಯ ಕಾಡುತ್ತಿರುತ್ತದೆ. 
ಎಲ್ಲಿ ಫೇಲಾಗುವೆನೊ, ಕಡಿಮೆ ಅಂಕಗಳಿಸುವೆನೊ ಎಂಬ ಆತಂಕ ಸುಳಿಯುತ್ತಿರುತ್ತದೆ. ಆದರೆ ಪ್ರಿಯ ವಿದ್ಯಾರ್ಥಿ ~ ವಿದ್ಯಾರ್ಥಿನಿಯರೇ ಆತಂಕ ಬಿಡಿ, ಸರಿಯಾಗಿ ಓದುವುದು ಹಾಗೂ ಪರೀಕ್ಷೆಗೆ ತಯಾರಾಗುವುದು ಕೂಡಾ ಒಂದು ಕಲೆ. ಹೆಚ್ಚಿನ ಏಕಾಗ್ರತೆ ಅತೀ ಮುಖ್ಯ. ಓದಿನಲ್ಲಿ ತನ್ಮಯತೆ ಮತ್ತು ಸತತ ಅಭ್ಯಾಸದಿಂದ ಏಕಾಗ್ರತೆಯನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಹೆದರಿಕೆ ಹೋಗುತ್ತದೆ ಎಂದರು. 
ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು   
 
 
 
 
 
 
 
 
 
 
 

Leave a Reply