ಅತಿಥಿ ಉಪನ್ಯಾಸಕರಿಗೆ ಗುಡ್‌ನ್ಯೂಸ್

ಬೆಂಗಳೂರು : ಕರೊನಾದಿಂದ ಬಹು ದೊಡ್ಡ ಪೆಟ್ಟು ತಿಂದಿದ್ದ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಇನ್ನೊಂದು ಶುಭ ಸುದ್ದಿ ನೀಡಿದೆ. ಹಿಂದಿನ ವಾರವಷ್ಟೇ ಐದು ತಿಂಗಳ ಬಾಕಿ ವೇತನ ಪಾವತಿಸಿದ್ದ ಸರ್ಕಾರ ಇದೀಗ, ಅವರ ಸೇವೆ ವರ್ಷದ ಮಟ್ಟಿಗೆ ಮುಂದುವರಿಸಿ ಆದೇಶ ಹೊರಡಿಸಿದೆ.

ಕರ್ನಾಟಕರ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ 2019-20ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು 2020-21ನೇ ಸಾಲಿಗೂ ಮುಂದುವರಿಸಲು ಸೋಮವಾರ ಸರ್ಕಾರ ಆದೇಶಿಸಿದೆ.

ಈ ಕೋರೊನಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸೇವೆ ಅಗತ್ಯವಾಗಿದ್ದು, ಹೀಗಾಗಿ ಅವರನ್ನು ಇನ್ನೊಂದು ಅವಧಿಗೆ ಮುಂದುವರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಲಾಕ್‌ಡೌನ್‌ನಿಂದಾಗಿ ಅವರೆಲ್ಲ ಜೀವನ ನಡೆಸುವುದೇ ಕಷ್ಟವಾಗಿ ತೊಂದರೆ ಅನುಭವಿಸುತ್ತಿದ್ದರು. ಇದೀಗ ಸರ್ಕಾರದ ಆದೇಶ ಅವರಲ್ಲಿ ಚೇತರಿಸಿಕೊಳ್ಳುವ ಭರವಸೆ ಮೂಡಿಸಿದೆ.

 
 
 
 
 
 
 
 
 
 
 

Leave a Reply