ಉಡುಪಿ ನಗರಸಭೆಯ ವಿಪಕ್ಷ ನಾಯಕರಾಗಿ ರಮೇಶ್ ಕಾಂಚನ್

ಉಡುಪಿ: ಉಡುಪಿ ನಗರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಬಳಿಕ ಗುರುವಾರ ಪ್ರಥಮ ಮಾಸಿಕ ಸಭೆ ಜರುಗಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷದ ನಾಯಕರಾಗಿ ರಮೇಶ್ ಕಾಂಚನ್ ಅವರನ್ನು ಪಕ್ಷ ಆರಿಸಿದೆ.
 
ಪ್ರಥಮ ಮಾಸಿಕ ಸಭೆಯಲ್ಲಿ ಈ ಕಾಂಗ್ರೆಸ್ ಪಕ್ಷದ ಸದಸ್ಯರ ಪರವಾಗಿ ನಗರಸಭಾ ಸದಸ್ಯೆ ಸೆಲಿನಾ ಕರ್ಕಡ ಅವರ ವಿಷಯ ಮಂಡನೆ ಮಾಡಿ ಅಧ್ಯಕ್ಷರಿಗೆ ಪಕ್ಷದ ಸೂಚನಾ ಪತ್ರವನ್ನು ಹಸ್ತಾಂತರಿಸಿದರು.35 ಸದಸ್ಯರಿರುವ ಉಡುಪಿ ನಗರಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 31 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.

ನಗರಸಭಾ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ರಮೇ​​ಶ್ ಕಾಂಚನ್, ಸೆಲಿನಾ ಕರ್ಕಡಾ, ಅಮೃತಾ ಕೃಷ್ಣಮೂರ್ತಿ ಹಾಗೂ ವಿಜಯ ಪೂಜಾರಿ ಆಯ್ಕೆಯಾಗಿದ್ದರು.

 
 
 
 
 
 
 
 
 
 
 

Leave a Reply