ವಿದ್ಯಾರ್ಥಿಗಳು ಇಂದು ನೆಟ್ಟ ಗಿಡಗಳು ಹಲವು ವರ್ಷಗಳ ನಂತರವೂ ಅವರನ್ನು ಸ್ವಾಗತಿಸಲಿವೆ’ ~ ಡಾ. ಮಮತಾ ಕೆ.ವಿ.

ವಿದ್ಯಾರ್ಥಿಗಳಿಗೆ ಗಿಡಗಳನ್ನು ಪೋಷಿಸುವ ಹೊಣೆಗಾರಿಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಕುತ್ಪಾಡಿಯ ದ್ರವ್ಯಗುಣ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವನಮಹೋತ್ಸವ – ಗುರುವಾರ, ಆಗಸ್ಟ್, 5 2021ರಂದು ಕಾಲೇಜಿನ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುತ್ಪಾಡಿ ಯೂನಿಯನ್ ಬ್ಯಾಂಕಿನ ಪ್ರಬಂಧ ಕರಾದ ಶ್ರೀಯುತ ಸುನಿಲ್ ಎಚ್.ಆರ್. ಅಳಿವಿನ ಅಂಚಿನಲ್ಲಿರುವ ಅಶೋಕದ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶು ಪಾಲೆ ಡಾ. ಮಮತಾ ಕೆ.ವಿ. ‘ವಿದ್ಯಾರ್ಥಿಗಳು ಇಂದು ನೆಟ್ಟ ಗಿಡಗಳು ಮುಂದೆ ಹಲವು ವರ್ಷಗಳ ನಂತರವೂ ಅವರನ್ನು ಸ್ವಾಗತಿಸಲಿವೆ’ ಎಂದು ನುಡಿದರು. 
ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮೀ  ಕೆ. ಅವರು ಕಾರ್ಯಕ್ರಮದ ರೂಪುರೇಶೆಯನ್ನು ವಿವರಿಸುತ್ತಾ ವಿದ್ಯಾರ್ಥಿಗಳು ತಮಗೆ ನೀಡಲ್ಪಟ್ಟ ಗಿಡವನ್ನು ಪದವಿ ಪೂರ್ಣಗೊಳಿಸುವ ತನಕ ಪೋಷಿಸಿ, ಸಂಕ್ಷಿಪ್ತ ವರದಿ ತಯಾರಿಸಬೇಕು. ಹೀಗೆ ಈ ವರ್ಷದ ವನಮಹೋತ್ಸವವು ಒಂದು ದಿನಕ್ಕೆ ಸೀಮಿತವಾಗಿರದೆ ಐದು ವರ್ಷಗಳು ಕಾರ್ಯ ಯೋಜನೆಯಾಗಿರುತ್ತದೆ ಎಂದರು.
 ಪ್ರಥಮ ಬಿಎಎಮ್‌ಎಸ್‌ನ ವಿದ್ಯಾರ್ಥಿಗಳು ತಲಾ ಒಂದೊಂದು ಔಷಧೀಯ ಸಸ್ಯದ ಸಂಪೂರ್ಣ ಪೋಷಣೆಯ ಹೊಣೆಗಾರಿಕೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಎಸ್.ಡಿ.ಎಮ್. ಆಯು ರ್ವೇದ ಆಸ್ಪತ್ರೆ, ಕುತ್ಪಾಡಿ ಇದರ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವೀರಕುಮಾರ ಕೆ. ಉಪಸ್ಥಿತರಿದ್ದರು. 
ಶರೀರ ಕ್ರಿಯಾ ವಿಭಾಗಾಧ್ಯಕ್ಷರಾದ ಡಾ. ಎಸ್.ಆರ್. ಮೊಹರೆರ್ ಎಲ್ಲರನ್ನೂ ಸ್ವಾಗತಿಸಿದರು. ದ್ರವ್ಯಗುಣ ವಿಭಾಗದ ಸಹಪ್ರಾಧ್ಯಾಪಕಿ ಡಾ. ಸುಮಾ ಮಲ್ಯ ಧನ್ಯವಾದ ಸಮರ್ಪಣೆ ನೆರವೇರಿ ಸಿದರು. ಎನ್ನೆಸ್ಸೆಸ್ ಸ್ವಯಂಸೇವಕಿ ಕು. ರೋಜಾ ಕಾರ್ಯಕ್ರಮ ನಿರೂಪಿಸಿದರು. ಕು. ಪಾವನ ಹಾಗೂ ಕು. ಪ್ರೀತಿ ಪ್ರಾರ್ಥಿಸಿದರು. ದ್ರವ್ಯಗುಣ ವಿಭಾಗದ ಡಾ. ಮೊಹಮ್ಮದ್ ಫೈಸಲ್, ಡಾ. ನಿವೇದಿತಾ ಶೆಟ್ಟಿ, ಎನ್ನೆಸ್ಸೆಸ್ ವಿಭಾಗದ ಶ್ರೀ ಆದರ್ಶ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಲಿಖಿತಾ ಡಿ.ಎನ್, ಡಾ. ರವಿ ಕೆ.ವಿ. ಹಾಗೂ ಸ್ವಯಂಸೇವಕರು ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದರು.
 
 
 
 
 
 
 
 
 
 
 

Leave a Reply