ಶುಲ್ಕ ಸಂಗ್ರಹವಾಗದೆ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವುದಾದರೂ ಹೇಗೆ?~ಪ್ರದೀಪ್ ಕುಮಾರ್, ನ್ಯಾಯವಾದಿ

ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿವೆ. ಕೊರೋನಾದ ಸಂದಿಗ್ಧ ಕಾಲದಲ್ಲೂ ಮಕ್ಕಳ ಶೈಕ್ಷಣಿಕ ಬದುಕು ತೊಂದರೆಗೆ ಸಿಗಬಾರದೆಂದು ಆನ್ಲೈನ್ ಮೂಲಕ
ಪಾಠ ಪ್ರವಚನಗಳನ್ನು ನೀಡಿವೆ. 
 
ಸರ್ಕಾರದ ಕೆಲವು ಇಬ್ಬಗೆಯ ನೀತಿಯಿಂದಾಗಿ ಶುಲ್ಕ ಸಂಗ್ರಹಕ್ಕೆ ಕಷ್ಟವಾಗಿದ್ದು, ಆದರೂ ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಈಗಲೂ ನೀಡುತ್ತಿದೆ. ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸರ್ವತೋಮುಖ ರೀತಿಯಲ್ಲಿ ಸಿದ್ಧಗೊಳಿಸುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು . 
 
ಭೌತಿಕ ತರಗತಿ ಆರಂಭವಾಗದಿದ್ದರೂ ಸಂಸ್ಥೆಯ ಶಾಲಾ ಬಸ್ ಗಳಿಗೆ ಇನ್ಸೂರೆನ್ಸ್, ತೆರಿಗೆ ಇವೆಲ್ಲವನ್ನು ನಿಗದಿತ ಸಮಯಕ್ಕೆ ಕಟ್ಟಲೇ ಬೇಕಾಗಿದೆ. ಬಸ್ ಸಿಬ್ಬಂದಿಗಳಿಗೆ ವೇತನ ನೀಡಬೇಕಾಗಿದೆ.​ ​ವಸತಿ ನಿಲಯ ವ್ಯವಸ್ಥೆಯಿರುವ ಕಾಲೇಜುಗಳು ವಸತಿಗೃಹಕ್ಕೆ ವಿದ್ಯಾರ್ಥಿಗಳು ದಾಖಲಾಗದಿದ್ದರೂ ಅಲ್ಲಿನ ಸಿಬ್ಬಂದಿಗಳಿಗೆ ವೇತನವನ್ನು ನೀಡಲೇಬೇಕು. 
 
ಈ ಎಲ್ಲಾ ನಷ್ಟವನ್ನು ಬರಿಸುವವರು ಯಾರು? ಅಲ್ಲದೆ ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಅಧ್ಯಾಪಕರು, ಉಪನ್ಯಾಸಕರು ಹಾಗೂ ಅಧ್ಯಾಪಕೇತರ ವರ್ಗಗಳಿಗೆ ಸಂಬಳ ನೀಡುವಲ್ಲಿ ತೊಂದರೆಯನ್ನು ಎದುರಿಸುತ್ತಿವೆ. ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚುವತ್ತ ಸಾಗುತ್ತಿದೆ. ಇದರಿಂದ ಪ್ರತಿಭಾನ್ವಿತ ಅಧ್ಯಾಪಕ, ಉಪನ್ಯಾಸಕ​ ​ರುಗಳು ಜೀವನ ನಿಮಿತ್ತ ಬೇರೆ ಕ್ಷೇತ್ರಗಳತ್ತ ಉದ್ಯೋಗವನ್ನು ಅರಸುತ್ತಿದ್ದಾರೆ. ಕೆಲವರು ಕೂಲಿಕೆಲಸ, ತರಕಾರಿ ವ್ಯಾಪಾರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
 
ಇದು ತುಂಬಾ ಬೇಸರದ ಸಂಗತಿ. ಅಲ್ಲದೆ ಶೈಕ್ಷಣಿಕ ಕ್ಷೇತ್ರಕ್ಕೆ ಇದು ದೊಡ್ಡ ಹೊಡೆತ. ಸರ್ಕಾರಿ ಉದ್ಯೋಗದಲ್ಲಿರುವರೂ ತಮ್ಮ ಮಕ್ಕಳನ್ನು ಸೇರಿಸುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ. ಕಾರಣ ಸ್ಪಷ್ಟ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವುದು. ಕೇವಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಕ್ಕೆ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. 
 
ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿದೆ. ಆದರೂ ಇಷ್ಟು ವರ್ಷಗಳ ಕಾಲ ಸಮಾಜಕ್ಕೆ ಗುಣಮಟ್ಟದ ಶಿಕ್ಷಣವನ್ನು ನೀಡಿದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದೊಂದಿಗೆ ಸುಸಂಸ್ಕೃತ ನಾಗರಿಕರನ್ನು ರೂಪಿಸಿದ ವಿದ್ಯಾಲಯ ಮತ್ತು ದೇವಾಲಯ ಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ.
 
ಇದು ದೇಶದ ಭವಿಷ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.​ ಆದ್ದರಿಂದ ಸರ್ಕಾರ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆಡಳಿತ ಮಂಡಳಿಯ ಜೊತೆ ಸಮಾಲೋಚಿಸಿ ಎಲ್ಲಾ ಅಧ್ಯಾಪಕ ಉಪನ್ಯಾಸಕರುಗಳಿಗೆ ಸರಕಾರವೇ ಮಾಸಿಕ ವೇತನವನ್ನು ನೀಡಬೇಕು. ಆ ಮೂಲಕ ಪ್ರತಿಭಾನ್ವಿತ ಉಪನ್ಯಾಸಕರು ಬೇರೆ ಕ್ಷೇತ್ರಗಳತ್ತ ಸಾಗದೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯ.

ಸಮಾಜದ ಜನರ ಸಹಕಾರವೂ ಈ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವಶ್ಯಕವಾಗಿದೆ. ಶುಲ್ಕ ಸಂಗ್ರಹವಾಗದೆ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವುದಾದರೂ ಹೇಗೆ? ಮಾನ್ಯ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಈ ಬಗ್ಗೆ ತುರ್ತು ಮುತುವರ್ಜಿವಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ವಿಶೇಷ ಗಮನ ಹರಿಸುವುದು ಈ ಸಂದರ್ಭದಲ್ಲಿ ಅತ್ಯವಶ್ಯಕ.​​
 
~​ಪ್ರದೀಪ್ ಕುಮಾರ್, ನ್ಯಾಯವಾದಿ ಹಾಗು ಗೌರವಾನ್ವಿತ ಕಾರ್ಯದರ್ಶಿ,

ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳು,​ ಉಡುಪಿ.​

 
 
 
 
 
 
 
 
 
 
 

Leave a Reply