ಪೂರ್ಣಪ್ರಜ್ಞ ಕಾಲೇಜಿನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ.

ದಿನಾಂಕ  5 ಎಪ್ರಿಲ್ 2023, ಬುಧವಾರದಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ನೇತೃತ್ವದಲ್ಲಿ ಆಂಗ್ಲ ವಿಭಾಗ ಹಾಗೂ ಕೆರಿಯರ್ ಗೈಡನ್ಸ್ ಮತ್ತು ಸ್ಟೂಡೆಂಟ್ ಟ್ರೈನಿಂಗ್ ವಿಭಾಗದ ಆಶ್ರಯದಲ್ಲಿ “ಜಾಬ್ ಇಂಟರ್ವ್ಯೂ ಸ್ಕಿಲ್ಸ್ ಅಂಡ್ ಎಟಿಕೆಟ್” ಎಂಬ ವಿಷಯದ ಮೇಲೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು  ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು . ಇದರಲ್ಲಿ ಕಾಲೇಜಿನ 295 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಶಾಂತ್ ಬಿ ಶೆಟ್ಟಿ, JCL  ವಲಯ ತರಬೇತುದಾರರು, ಮಂಗಳೂರು, ಮತ್ತು ಪ್ರವೀಣ್ ಉಡುಪ, ಸಂಸ್ಥಾಪಕರು ತಾಂತ್ರಿಕ ನಿರ್ದೇಶಕರು, ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ ಅಧ್ಯಕ್ಷತೆ ವಹಿಸಿದ್ದರು, ಉಪ ಪ್ರಾಂಶುಪಾಲ ಡಾ| ಪ್ರಕಾಶ್ ರಾವ್, ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ| ವಿನಯ್ ಕುಮಾರ್, ಆಂಗ್ಲ ವಿಭಾಗದ ಮುಖ್ಯಸ್ಥರಾದ ಪ್ರೊ ವಸಂತಾ ಆರ್, ಶ್ರೀಮತಿ ಜಯಲಕ್ಷ್ಮಿ, ಡಾ|  ಆನಂದ ಆಚಾರ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುದೀಪ್ ಹಾಗೂ ಕು. ಚೈತ್ರಾ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಕು.ವೈಷ್ಣವಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿ, ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply