ಜೂನ್ 9 ರಂದು ಲಸಿಕಾ ಲಭ್ಯತೆ​ಯ ಮಾಹಿತಿ ​

ಉಡುಪಿ : ಜಿಲ್ಲೆಯಲ್ಲಿ ಜೂನ್ 9 ರಂದು 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗೂ ಕೇಂದ್ರ​ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ (ಸೇಂಟ್ ಸಿಸಿಲಿ ಶಾಲೆ) 200 ಡೋಸ್,​ ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಮಾಧವ ಕೃಪಾ ಶಾಲೆ, ಮಣಿಪಾಲ) 100 ಡೋಸ್ ಹಾಗೂ ಉಡುಪಿಯ​ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಖಾಸಗಿ ಆಂಗ್ಲ ಮಾಧ್ಯಮ ಶಾಲೆ, ಅಂಬಲಪಾಡಿ) 50 ಡೋಸ್ ಪ್ರಥಮ ಡೋಸ್​ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುವುದು.

ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು ಹಾಗೂ ದುರ್ಬಲ ಗುಂಪಿನ​ ಫಲಾನುಭವಿಗಳಿಗೆ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ನಗರದ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್)​ ಆಸ್ಪತ್ರೆಯಲ್ಲಿ 150 ಡೋಸ್, ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಸರಕಾರಿ ಪ್ರಾಥಮಿಕ ಶಾಲೆ ಆದಿಉಡುಪಿ )​ 150 ಡೋಸ್, ಕುಕ್ಕಿಕಟ್ಟೆಯ ಎಫ್.ಪಿ.ಎ.ಐ ನಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ) 50​ ಡೋಸ್ ಲಸಿಕೆ ನೀಡಲಾಗುವುದು.

45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗೂ ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ 2 ನೇ ಡೋಸ್​ ಕೋವಿಶೀಲ್ಡ್ ಲಸಿಕೆಯನ್ನು ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಮಾಧವ ಕೃಪಾ ಶಾಲೆ, ಮಣಿಪಾಲ) 50​ ಡೋಸ್ ಹಾಗೂ ಕುಕ್ಕಿಕಟ್ಟೆಯ ಎಫ್.ಪಿ.ಎ.ಐ ನಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ) 50​ ಡೋಸ್ ಲಸಿಕೆ ನೀಡಲಾಗುವುದು.

45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗೂ ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ 2 ನೇ ಡೋಸ್​ ಕೋವ್ಯಾಕ್ಸಿನ್ ಲಸಿಕೆಯನ್ನು ನಗರದ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ 100 ಡೋಸ್, ಉಡುಪಿಯ​ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಖಾಸಗಿ ಆಂಗ್ಲ ಮಾಧ್ಯಮ ಶಾಲೆ, ಅಂಬಲಪಾಡಿ) 100 ಡೋಸ್ ಹಾಗೂ ಮಣಿಪಾಲದ​ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಮಾಧವ ಕೃಪಾ ಶಾಲೆ, ಮಣಿಪಾಲ) 100 ಡೋಸ್ ನೀಡಲಾಗುವುದು.

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು,​ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ​ ಕಾರ್ಯಕರ್ತರಿಗೆ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ, 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ ಕೋವ್ಯಾಕ್ಸಿನ್ 2ನೇ ಡೋಸ್​ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು​​ ಖಚಿತಪಡಿಸಿ​ ​ಕೊಂಡು ಜೂನ್ 9 ರಂದು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬೇಕು.

ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರು 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲು​ ಹಾಗೂ ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಸಿಕೆ ಪಡೆದು 6 ವಾರ ಮೀರಿದವರು ಕೋವ್ಯಾಕ್ಸಿನ್ 2 ನೇ ಡೋಸ್ ಲಸಿಕೆ ಪಡೆಯಲು​ ಅರ್ಹರಿರುತ್ತಾರೆ.​ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ​ ಅಧಿಕಾರಿ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply