ಸೈಬರ್‌ ಅಪರಾಧಗಳ ಬಗ್ಗೆ ಪೂರ್ಣ ಅರಿವು ಅಗತ್ಯ ~ದೇವರಾಜ್‌

ಉಡುಪಿ: ಇಂದು ಸೈಬರ್‌ ಕ್ರೆಮ್‌ ವ್ಯಾಪಕವಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಸೈಬರ್‌ ಲೋಕದ ಸೂಕ್ಷ್ಮತೆ ಹಾಗೂ ಅಪರಾಧ ಜಗತ್ತಿನ ವಿದ್ಯಾಮಾನಗಳಿಗೆ ಯುವಜನತೆ ಕೈಗೊಳ್ಳಬೇಕಾದ ತಿಳುವಳಿಕೆ ಅಗತ್ಯ. ಆಧುನಿಕ ತಂತ್ರಜ್ಞಾನದ ಸದ್ಬಳಕೆ ಅತಿ ಮುಖ್ಯ ಎಂದು ಮಣಿಪಾಲದ ಸರ್ಕಲ್‌ ಇನ್‌ ಸ್ಪೆಕ್ಟರ್ ‌ ಶ್ರೀ ದೇವರಾಜ್‌ ಹೇಳಿದರು. ಅವರು ಡಾ. ಜಿ. ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್‌.ಸಿ.ಸಿ ಸಹಯೋಗದಲ್ಲಿ ನಡೆದ ಸೈಬರ್‌ ಅಪರಾಧಗಳ ಕುರಿತಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎನ್‌.ಸಿ.ಸಿ ನೇವಲ್‌ ವಿಂಗ್‌ ಕಮಾಂಡರ್‌ ಶ್ರೀ ಕ್ಲಾಡಿ ಲೋಬೋ ಎನ್.‌ಸಿ.ಸಿ ಮೂಲಕ ಸಾಮಾಜಿಕ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಎಸ್‌ ಇವರು ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ನಿಕೇತನರವರು ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಎನ್.ಎಸ್.ಎಸ್‌ ಯೋಜನಾಧಿಕಾರಿಯಾದ ಶ್ರೀಮತಿ ವಿದ್ಯಾ ಡಿ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕರಾದ ಕು. ಪ್ರೀತಿ, ಕು. ನೇಹಾ ಉಪಸ್ಥಿತರಿದ್ದರು. ಬಳಿಕ ಕರ್ನಾಟಕ ಮತ್ತು ಗೋವಾ ರಾಜ್ಯಗಳಿಂದ ಎನ್.‌ಸಿ.ಸಿ ನೇವಲ್‌ ವಿಂಗ್‌ ನ ವತಿಯಿಂದ ನಡೆಯುತ್ತಿರುವ ಶಿಬಿರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಎನ್.‌ಸಿ.ಸಿ ಕೆಡೆಟ್‌ಗಳು ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರೊಂದಿಗೆ ಸೈಬರ್‌ ಅಪರಾಧದ ಬಗ್ಗೆ ಸಂವಾದ ನಡೆಯಿತು.

 
 
 
 
 
 
 
 
 
 
 

Leave a Reply