ಗಣರಾಜ್ಯೋತ್ಸವ ದಿನಾಚರಣೆ

ಮಿಲಾಗ್ರಿಸ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಎನ್. ಸಿ. ಸಿ ,  ರೋವರ್ಸ್ ರೇಂಜರ್ಸ್ ಸಹಯೋಗದೊಂದಿಗೆ ಗಣರಾಜ್ಯೋತ್ಸವ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ವಿಜ್ಡೋಮ್  ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಫ್ರಾನ್ಸಿಸ್ಕರವರು ಧ್ವಜಾರೋಹಣವನ್ನು ಮಾಡಿ  ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಅದರಂತೆ ನಡೆದುಕೊಂಡು ಬಾಳಬೇಕು. ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಉತ್ತಮ ಅಭ್ಯಾಸಗಳನ್ನು  ಬೆಳೆಸಿ ಉತ್ತಮ ನಾಗರಿಕರಾಗಿ ಬಾಳಬೇಕೆಂದು ಸಂದೇಶ ನೀಡಿದರು.  
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕಲ್ಯಾಣಪುರ ಮಿಲಾಗ್ರಿಸ್  ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಫಾದರ್ ವಲೇರಿಯನ್ ಮೆಂಡೋನ್ಸಾ ರವರು ವಹಿಸಿ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಶುಭಾಶಯವನ್ನು ನೀಡಿದರು.  ಈ ಕಾರ್ಯಕ್ರಮದಲ್ಲಿ  ಸಮುದ್ರದಲ್ಲಿ ಸರಿಸುಮಾರು ಮೂರು ಕಿಲೋಮೀಟರ್ ಗಳು  ಕೈಗೆ  ಬೇಡಿ ತೊಟ್ಟು  ಈಜಾಡಿ ಸಾಧನೆ ತೋರಿದ ಕಾಲೇಜಿನ ಹಳೆ ವಿದ್ಯಾರ್ಥಿ ಶ್ರೀ  ಗಂಗಾಧರ್ ಜಿ ಕಡೆಕಾರು ಇವರನ್ನು ಸನ್ಮಾನಿಸಲಾಯಿತು.  
ವಿದ್ಯಾರ್ಥಿಗಳು ಪಥಸಂಚಲನ ನಡೆಸುವ ಮೂಲಕ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವಿನ್ಸೆಂಟ್ ಆಳ್ವ,   ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶು ಪಾಲರಾದ ಶ್ರೀಮತಿ ಸವಿತಾ,  ಐಕ್ಯೂಎಸಿ  ಸಂಯೋಜಕರಾದ   ಡಾಕ್ಟರ್  ಜಯರಾಮ್  ಶೆಟ್ಟಿಗಾರ್,  ರಾಷ್ಟ್ರೀಯ ಸೇವಾ ಯೋಜನಾಧಿಕಾರಿ  ಶ್ರೀಮತಿ ಅನುಪಮ ಜೋಗಿ,  ಶ್ರೀ ಮೆಲ್ಸನ್ ಡಿಸೋಜ  ಕಾಲೇಜಿನ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply