ವೈಕುಂಠ ಬಾಳಿಗಾ ಕಾನೂನು ಕಾಲೇಜಿನನಲ್ಲಿ ಗುರುವಂದನಾ ಮತ್ತು ಪುನರ್ ಮಿಲನ

ವೈಕುಂಠ ಬಾಳಿಗಾ ಕಾನೂನು ಕಾಲೇಜಿನ 1994 to 1997 ರಲ್ಲಿ ಕಲಿತ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಪುನರ್ ಮಿಲನ ಕಾರ್ಯಕ್ರಮ ಇದೇ ತಾರೀಕು 16 ಮತ್ತು 17 ರಂದು ಕೋಟೇಶ್ವರದ ಸಹನಾ ಬೀಚ್ ರೆಸಾರ್ಟ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗುರುಗಳನ್ನು ಸ್ವಾಗತಿಸಿ, ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಆರಂಭಿಸಲಾಯಿತು.

ವಿವಿಧ ರಾಜ್ಯಗಳಲ್ಲಿ ನೆಲೆಸಿರುವ VBCLaw ಉಡುಪಿಯ ಹಳೆ ವಿದ್ಯಾರ್ಥಿ ಗಳು 26 ವರ್ಷಗಳ ನಂತರ ಒಗ್ಗೂಡಿ ತಮ್ಮ ಗುರುಗಳನ್ನು ಮತ್ತು ಭೋದಕರನ್ನು ಗೌರವಿಸಿದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಗುರುಗಳಾದ, ಪ್ರೊ. ಪ್ರಕಾಶ್ ಕಣವಿ, ಪ್ರೊ. ವೇಣುಗೋಪಾಲ್, ಪ್ರೊ. ರೋಹಿತ್ ಅಮೀನ್, ಹಿರಿಯ ನ್ಯಾಯವಾದಿ ಪ್ರೊ. ಮಾಧವ ಆಚಾರ್ಯ, ಈಗಿನ ಡೈರೆಕ್ಟರ್ ಡಾ. ನಿರ್ಮಲಾ ಇವರು ಗುರುವಂದನೆಯನ್ನು ಸ್ವೀಕರಿಸಿ, ತಮ್ಮ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಉಪನ್ಯಾಸಕರಾದ ಸುರೇಖಾ ಕೆ., ಡಾ. ಶ್ರೀನಿವಾಸ ಪ್ರಸಾದ್, ಡಾ. ನವೀನ್ ಚಂದ್ರ, ಈರಪ್ಪ ಎಸ್. ಮೇಧಾರ್, ಅಮೋಘ್ ಉಪಸ್ಥಿತರಿದ್ದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ಕಾಲನ ಕರೆಗೆ ಓಗೊಟ್ಟು ನಿಧನರಾದ ಹಿರಿಯ ಉಪನ್ಯಾಸಕರು ಮತ್ತು ಕೆಲವು ವಿದ್ಯಾರ್ಥಿಗಳಿಗೆ ಗೌರವವಾಗಿ ಮೌನ ಪ್ರಾರ್ಥನೆ ಸಲ್ಲಿಸ ಲಾಯಿತು.

ಕಾರ್ಯಕ್ರಮ ಸಂಯೋಜಕರಾದ ರವೀಂದ್ರ ಮೊಯಿಲಿ ಕಾರ್ಕಳ ಮತ್ತು ಆಲ್ವಿನ್ ಡಿಸೋಜ ಪರ್ಕಳ, ವಿಪುಲ ನಾಯಕ್ ಮುಂಬಯಿ, ಭಾಮಿನಿ ಶ್ರೀಧರ್, ರವಿರಾಜ್ ರಾವ್ ಉಡುಪಿ, ಸುಪ್ರಿತಾ ಭಾಸ್ಕರ್ ಕಲ್ಮಾಡಿ, ಶೈಲ ದೀಪಕ್ ಶೆಣೈ ಮಣಿಪಾಲ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿಪುಲ ನಾಯಕ್ ಸ್ವಾಗತಿಸಿ, ಚಂದ್ರಹಾಸ್ ಶೆಟ್ಟಿ ಮಂಗಳೂರು ಇವರು ವಂದಿಸಿದರು.

 
 
 
 
 
 
 
 
 
 
 

Leave a Reply