ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜ್ ನಲ್ಲಿ ಎನ್ನೆಸ್ಸೆಸ್ ಘಟಕ ಉದ್ಘಾಟನೆ

ಕಲ್ಯಾಣಪುರ ಮಿಲಾಗ್ರಿಸ್ ವಿದ್ಯಾಸಂಸ್ಥೆಯಲ್ಲಿ2021-2022 ಸಾಲಿನ ಎನ್ಎಸ್ಎಸ್ ಘಟಕದ ಉದ್ಘಾಟನಾ ಸಮಾರಂಭವನ್ನು ಆಚರಿಸಲಾಯಿತು. ಡಾ .ಗುರು ತೇಜ್ ಕಾರ್ಯಕ್ರಮ ಉದ್ಘಾಟಿಸಿ ಎನ್ಎಸ್ಎಸ್ ನ ಮಹತ್ವ ಮತ್ತು ಯುವಪೀಳಿಗೆಯು ಸಮಾಜಸೇವೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ನೀಡಿ ಸ್ವಯಂಸೇವಕರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಮುನ್ನಡೆಯುವಂತೆ ಹುರುದುಂಬಿಸಿದರು.

ಕಾಲೇಜಿನ ಸಂಚಾಲಕರಾದ ರೆವರೆಂಡ್ ಫಾದರ್ ವಲೇರಿಯನ್ ಮೆಂಡೊನ್ಸಾ ಅವರು ಉತ್ತಮ ನಾಯಕತ್ವ ಗುಣಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಅನುಕರಿಸುವಂತೆ ಸ್ವಯಂಸೇವಕರು ಗಳನ್ನು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವಿನ್ಸೆಂಟ್ ಆಳ್ವಾ, ಈಜು ಪಟು ಗಂಗಾಧರ ಕಡೆಕಾರ್ ,ಫಾದರ್ ಜಾಯ್ ,ಪದವಿಪೂರ್ವ ಪ್ರಾಂಶುಪಾಲರಾದ ಸವಿತಾ ಹೆಬ್ಬಾರ್ ,ಐಕ್ಯೂಎಸಿ ಸಂಯೋಜಕರಾದ ಡಾ. ಜಯರಾಮ್ ಶೆಟ್ಟಿಗಾರ್ ಎನ್ಎಸ್ಎಸ್ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಜೋಗಿ ಮತ್ತು ಮೆಲ್ಸನ್ ಡಿಸೋಜ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಎನ್ಎಸ್ಎಸ್ ನ ನಾಯಕರುಗಳಾದ ಸಾಕ್ಷಿತ್ ಸ್ವಾಗತಿಸಿ ,ಗೌರವ್ ಧನ್ಯವಾದಿಸಿ, ಸ್ವಾತಿ ನಿರೂಪಣಾ ಕಾರ್ಯವನ್ನು ನಿರ್ವಹಿಸಿದರು.

 
 
 
 
 
 
 
 
 
 
 

Leave a Reply