ಡಿಸೆಂಬರ್ 21 ಗುರು ಹಾಗೂ ಶನಿ ಗ್ರಹಗಳ ಸಮಾಗಮ~ಡಾ ಎ ಪಿ ಭಟ್, ಉಡುಪಿ.

ಸೌರವ್ಯೂಹ ದ ಎರಡು ಬ್ರಹತ್ ಗ್ರಹಗಳು, ಗುರು ಮತ್ತು ಶನಿ. ಈ ಎರಡೂ ಗ್ರಹಗಳು ಬಹಳ ಸಮೀಪವಿದ್ದಂತೆ ಈ ತಿಂಗಳು ಕಾಣುತ್ತಿವೆ. ( The great conjunction) ಸಂಜೆಯ ಪಶ್ಚಿಮ ಆಕಾಶ ವನ್ನೊಮ್ಮೆ ನೋಡಿ.
ಈ ಗ್ರಹಗಳ ಜೋಡಿ , ಶ್ರವಣ ನಕ್ಷತ್ರದ ಪಕ್ಕದಲ್ಲಿ ನಿಮ್ಮನ್ನು ಆಕರ್ಷಿಸುತ್ತವೆ.

ಗುರು ಗ್ರಹಕ್ಕೆ ಸೂರ್ಯನ ನ್ನೊಮ್ಮೆ ಸುತ್ತಲು 12 ವರ್ಷ(11.9) ಬೇಕಾದರೆ, ಶನಿಗ್ರಹಕ್ಕೆ ಸುಮಾರು 30 (29.5)ವರ್ಷಗಳು ಬೇಕು. ಪ್ರತೀ 20 ವರ್ಷಕ್ಕೊಮ್ಮೆ ಈ ಎರಡು ಗ್ರಹಗಳು ಸಮೀಪದಲ್ಲಿ ಕಾಣುತ್ತವೆಯಾದರೂ ಈ ಸಲ ಭಾರೀ ಸಮೀಪ. ಈ ತಿಂಗಳ ಪ್ರತೀದಿನ ಹತ್ತಿರ ಹತ್ತಿರ ಬಂದು, ಡಿಸೆಂಬರ್ 21ರಂದು ಕನಿಷ್ಠ ಅಂತರ ,ಬರೇ 6 ನಿಮಿಷದ ಅಂತರದಲ್ಲಿ (0.1 ಡಿಗ್ರಿ ) ಬರಲಿವೆ.

ಇಷ್ಟು ಹತ್ತಿರ ಈ ಮೊದಲು 1226, ಮಾರ್ಚ್ 4ರಂದು ಈ ಹಿಂದೆ ಬಂದಿತ್ತು. ಮುಂದೆ ಹೀಗೆ 2080 ಮತ್ತೆ, 2400ರಲ್ಲಿ ಈ ಸಮೀಪ ಈ ಗ್ರಹಗಳು ಕಾಣಲಿವೆ. ಇದೊಂದು ಅಪರೂಪದ ಆಕಾಶದ ವಿದ್ಯಾಮಾನ. ನಿಜವಾಗಿ ಗುರು ಗ್ರಹ ಭೂಮಿ ಯಿಂದ ಈಗ, ಸುಮಾರು 89 ಕೋಟಿ ಕಿಮೀ ದೂರದ ಲ್ಲಿದೆಯಾದರೆ, ಶನಿ ಗ್ರಹ ಗುರು ಗ್ರಹ ರಿಂದ ಅಷ್ಟೇ ಆಳದಲ್ಲಿ, ಅಂದ್ರೆ ಭೂಮಿ ಯಿಂದ ಸುಮಾರು 159 ಕೋಟಿ ಕಿಮೀ ದೂರದಲ್ಲಿದೆ.

ಆದರೂ ನಮಗೆ ಆಕಾಶದಲ್ಲಿ ಭೂಮಿಯಿಂದ ನೋಡುವಾಗ ಸಮೀಪ ಬಂದಂತೆ ಭಾಸವಾಗುತ್ತಿವೆ. ಇದೂ ಆಕಾಶದಲ್ಲಿ ನಡೆಯುವ ಚಮತ್ಕಾರವಲ್ಲವೇ.  ನೋಡಿ ಆನಂದಿಸಬೇಕು.

 
 
 
 
 
 
 
 
 
 
 

Leave a Reply