“ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವಕ್ಕೆ ಛಾಯಾಚಿತ್ರ ಸಾಂಗತ್ಯ” ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ  

ರಾಶಿಪೂಜಾ ಮಹೋತ್ಸವದ ಸಂಭ್ರಮವನ್ನು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ದಾಖಲೀಕರಿಸಿ,  ಮಹೋತ್ಸವದ ಸೌಂದಯವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಡವೂರು ಪ್ರಕಾಶ್ ಜಿಯವರು  ರಾಶಿ ಪೂಜಾ ಮಹೋತ್ಸವ ಸೇವಾ ಸಮಿತಿ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಹಾಗು ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಷಿಯೇಷನ್ ಉಡುಪಿ ವಲಯ ಆಯೋಜಿಸಿದ್ದ “ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವಕ್ಕೆ ಛಾಯಾಚಿತ್ರ ಸಾಂಗತ್ಯ” ಎಂಬ ಶೀರ್ಷಿಕೆಯಡಿಯಲ್ಲಿ  ಏರ್ಪಡಿಸಲಾಗಿದ್ದ ಛಾಯಾಗ್ರಹಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಸೋಮವಾರದಂದು ವಿಜೇತರಿಗೆ ಬಹುಮಾನ ನೀಡಿ ಗೌರವಿಸಿ, ಮಾತನಾಡಿದರು.

ಇನ್ನೋರ್ವ ಅತಿಥಿ ಜೇಸಿಐ ಸ್ವರ್ಣ ಉಡುಪಿಯ ಅಧ್ಯಕ್ಷ ಸುದೀಪ್ ಶೆಟ್ಟಿ ಮಾತನಾಡಿ ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವದ ಛಾಯಾಗ್ರಹಣವು ಅತ್ಯಂತ ಕಲಾತ್ಮಕವಾಗಿ ಮೂಡಿ ಬಂದಿದೆ. ನಿಜವಾಗಿಯೂ ಛಾಯಾಗ್ರಾಹಕರು ಅಭಿನಂದನಾರ್ಹರು ಎಂದರು.

ಬಹುಮಾನ ವಿಜೇತರಾದ ಪ್ರದೀಪ್ ಉಪ್ಪುರು, ಪ್ರಶಾಂತ್ ಕೆಮ್ಮಣ್ಣು, ಶ್ರೀಕಾಂತ್ ಉಡುಪ, ದಾಮೋದರ್ ಸುವರ್ಣ ಹಾಗು ಸಚಿನ್ ಪೂಜಾರಿರವರಿಗೆ ಬಹುಮಾನ ವಿತರಿಸಲಾಯಿತು. ನಮ್ಮ ವಲಯದ ಸದಸ್ಯರಾಗಿದ್ದು ಪ್ರಸ್ತುತ ಬಾದಾಮಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಬಿ.ಎಮ್ ಬೋವಿಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಲಯ ಗೌರವಾಧ್ಯಕ್ಷ ಶಿವ ಕೆ. ಅಮೀನ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಆಸ್ಟ್ರೋ ಮೋಹನ್ ಸಹಕರಿಸಿದ್ದರು

ರಾಶಿಪೂಜಾ ಸೇವಾ ಸಮಿತಿಯ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಪ್ರಸ್ತಾಪಿಸಿದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು. ಕಾರ್ಯದರ್ಶಿ ಸುಕೇಶ್ ಅಮೀನ್ ವಂದಿಸಿದರು.

Leave a Reply