Janardhan Kodavoor/ Team KaravaliXpress
33 C
Udupi
Friday, February 26, 2021

ಎಸೆಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಂವಾದ.

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಂ. ವಿ. ಶಾಸ್ತ್ರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿಸಲು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಸಂವಾದ ನಡೆಸಿದರು. ಶಿಸ್ತುಬದ್ಧ ಓದುವ ಅಭ್ಯಾಸ, ವೇಳಾಪಟ್ಟಿ ಮಾಡಿಕೊಂಡು ಓದುವುದು, ಪ್ರತೀ ವಿಷಯಗಳಿಗೆ ಸಮಾನ ಪ್ರಾಶಸ್ತ್ಯ ನೀಡುವುದು ಇತ್ಯಾದಿ ವಿಷಯಗಳ ಬಗ್ಗೆ ಅರ್ಧ ಗಂಟೆಗೂ ಅಧಿಕ ಹೊತ್ತು ಮಾತುಕತೆ ನಡೆಸಿದರು.
ವಿದ್ಯಾರ್ಥಿಗಳ ಕನಸುಗಳ ಬಗ್ಗೆ ಪ್ರಶ್ನೆ ಮಾಡಿದರು. ಪರೀಕ್ಷಾ ಭಯ ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು. ತನ್ನದೇ ಬದುಕಿನ ಉದಾಹರಣೆಗಳ ಮೂಲಕ ಅವರು ಮಕ್ಕಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. 
ಅವರ ಜೊತೆಗೆ ಉಡುಪಿ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ಕುಮಾರ್ ಅವರು ಕೂಡ ಪೂರಕ ಮಾಹಿತಿ ನೀಡಿದರು. ಪಲಿಮಾರು ಪಂಚಾಯತ್ ಅಧ್ಯಕ್ಷೆ ಗಾಯತ್ರೀ ದಿನೇಶ್ ಪ್ರಭು, ಉಪಾಧ್ಯಕ್ಷೆ ಸೌಮ್ಯಲತ ಶೆಟ್ಟಿ, ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು, ಶಾಲೆಯ ಎಲ್ಲಾ ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 
ಮುಖ್ಯ ಶಿಕ್ಷಕ ಪ್ರಕಾಶ್ ರಾವ್ ಪಿ. ಎನ್ ಅವರು ಅಪರ ಜಿಲ್ಲಾಧಿಕಾರಿ ಅವರನ್ನು ಶಾಲು ಹೊದೆಸಿ ಸನ್ಮಾನ ಮಾಡಿದರು. ರಾಜೇಂದ್ರ ಭಟ್ ಕೆ.  ಕಾರ್ಯಕ್ರಮ ನಿರ್ವಹಣೆ ಮಾಡಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ 

ಉಡುಪಿ:  ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ  ಶುಕ್ರವಾರ ವಿದ್ವಾನ್ ಕಬಿಯಾಡಿ​ ​ಜಯರಾಮ ​ಆಚಾರ್ಯ  ಮಾರ್ಗ ದರ್ಶನದಲ್ಲಿ  ಆಶ್ಲೇಷಾಬಲಿ , ನವಕ ಕಲಶ, ಪ್ರಧಾನ ಹೋಮ...

ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ನೂತನ  ಅಧ್ಯಕ್ಷೆ 

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ...

ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ಮಾರ್ಚ್,1ರಂದು ತ್ರಿಕಾಲ ಪೂಜೆ 

 ದುರ್ಗಾ ಸೇವಾ ಸಮಿತಿ ಕುಂಜೂರು ಇವರು ಆಯೋಜಿಸುವ  ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಇಲ್ಲಿ ಮಾರ್ಚ್,1 ರಂದು  ತ್ರಿಕಾಲ ಪೂಜೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ  ಶ್ರೀ ದುರ್ಗಾ ಮಾತೆಗೆ ವಿಸ್ತೃತ...

ಹೆಸರಾಂತ ಆಯುರ್ವೇದ ವೈದ್ಯ ಜಿ. ಶ್ರೀನಿವಾಸ ಆಚಾರ್ಯ ನಿಧನ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಜಿ. ಶ್ರೀನಿವಾಸ ಆಚಾರ್ಯ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ...
error: Content is protected !!