ವಿದ್ಯಾಪೋಷಕ್ ನಿಂದ 19ನೇ ಮನೆಯ ಹಸ್ತಾಂಂತರ

ಕಾರ್ಕಳ : ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಕಾರ್ಕಳ ತಾಲೂಕಿನ ಅಜೆಕಾರ್ ನ ವಿದ್ಯಾಪೋಷಕ್ ಫಲಾನುಭವಿ ಅಂತಿಮ ಪದವಿ ವಿದ್ಯಾರ್ಥಿನಿ ನಿರೀಕ್ಷಾಳಿಗೆ ನವೀಕೃತ ಮನೆ ‘ಶ್ರೀಗುರು’ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ನಡೆಯಿತು.

ಮನೆಯ ಪ್ರಾಯೋಜಕತ್ವ ವಹಿಸಿದ C4U ಚಾನಲ್‍ನ ಮಾಲಕ ಗುರುರಾಜ ಅಮೀನ್ ಮತ್ತು ಜಯಲಕ್ಷ್ಮೀ ಅಮೀನ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಉದ್ಯಮಿ ಯು. ವಿಶ್ವನಾಥ ಶೆಣೈ, ನಿವೃತ್ತ ಅಧ್ಯಾಪಕ ರಾಜಗೋಪಾಲ ಆಚಾರ್ಯ, ನಿವೃತ್ತ ಬ್ಯಾಂಕ್ ಉದ್ಯೋಗಿ ಬಾಲಕೃಷ್ಣ ಭಟ್ ಕೆ. ಭಾಗವಹಿಸಿದ್ದರು. ನಿರೀಕ್ಷಾ ಮಾತನಾಡಿ ವಿದ್ಯಾಪೋಷಕ್ ವಿದ್ಯಾಥಿಗಳ ಎಲ್ಲಾ ರೀತಿಯ ಕಷ್ಟಕ್ಕೆ ಸ್ಪಂದಿಸುತ್ತದೆ. ನಾನು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದ ಬಳಿಕ ನನ್ನಂತೆಯೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೇನೆ ಎಂದು ಹೃದಯತುಂಬಿ ತನ್ನ ಅನಿಸಿಕೆ ವ್ಯಕ್ತಪಡಿಸಿದಳು.

ಇದು ಸಂಸ್ಥೆ ನಿರ್ಮಿಸಿಕೊಡುತ್ತಿರುವ 19ನೇ ಮನೆಯಾಗಿದೆ. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ಕಾರ್ಯಕರ್ತರನ್ನು ಪರಿಚಯಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.  ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಮನೋಹರ್ ಕೆ, ಜತೆಕಾರ್ಯದರ್ಶಿ ಹೆಚ್.ಎನ್ ಶೃಂಗೇಶ್ವರ ಹಾಗೂ ಕಲಾರಂಗದ ಕಾರ್ಯಕರ್ತರಾದ ಭುವನಪ್ರಸಾದ್ ಹೆಗ್ಡೆ, ವಿಜಯ್ ಕುಮಾರ್ ಮುದ್ರಾಡಿ, ದಿನೇಶ್ ಪೂಜಾರಿ, ನಟರಾಜ ಉಪಾಧ್ಯ, ಅಶೋಕ್ ಎಂ. ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಕೆ.ಎಸ್ ಸುಬ್ರಹ್ಮಣ್ಯ ಬಾಸ್ರಿ, ರಾಜೇಶ್ ನಾವುಡ, ಆನಂದ ಶೆಟ್ಟಿ,ಮಂಜುನಾಥ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply