ಉಡುಪಿ: ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದಲ್ಲಿ ಹೊಲಿಗೆ ತರಬೇತಿ ಪಡೆದ ಪರ್ಕಳದ ಮಹಿಳಾ ಸ್ವ ಉದ್ಯೋಗಿ ಸನ್ನೀತಾಗೆ ಹೋಮ್ ಡಾಕ್ಟರ್ಸ್ ಫೌಂಡೇಶನ್, ಉಡುಪಿಯಿಂದ ಉಚಿತ ವಾಗಿ ಕೊಡಮಾಡಿದ ಹೈ ಸ್ಪೀಡ್ ಹೊಲಿಗೆ ಯಂತ್ರವನ್ನು ಶನಿವಾರ ಹಸ್ತಾಂತರಿಸಲಾಯಿತು.
ಸನ್ನಿತಾ ಅವರು ತಯಾರಿಸಿದ 10 ವಿವಿಧ ಮಾದರಿಯ ಲೇಡಿಸ್ ಹ್ಯಾಂಡ್ ಬ್ಯಾಗ್ ಗಳನ್ನು ಡಾಕ್ಟರ್ ಫೌಂಡೇಶನ್ ಮೂಲಕ ಖರೀದಿಸಲಾಯಿತು ಮತ್ತು ಇನ್ನೂ 10 ಬ್ಯಾಗ ಗಳಿಗಾಗಿ ಇದೇ ಸಂಸ್ಥೆಯಿಂದ ಬೇಡಿಕೆ ಬಂದಿರುತ್ತದೆ. 20 ಬ್ಯಾಗಿಗೆ ಸುಮಾರು ರೂ.6500/- ಗಳಿಸಿರುತ್ತಾರೆ. ಈ ಸಮಾರಂಭದಲ್ಲಿ ಹೋಮ್ ಡಾಕ್ಟರ್ಸ್ ಫೌಂಡೇಶನ್ ಪದಾಧಿಕಾರಿಗಳು, ಭಾರತೀಯ ವಿಕಾಸ ಟ್ರಸ್ಟಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಭಾರತೀಯ ವಿಕಾಸ ಟ್ರಸ್ಟ್ ಮೂಲಕ ತರಬೇತಿಯನ್ನು ಪಡೆದ ಸನ್ನೀತಾ ತರಬೇತಿಯ ನಂತರ ಟ್ರಸ್ಟಿಗೆ ಹಲವಾರು ಬಾರಿ ಭೇಟಿ ಇತ್ತು ಸ್ವ ಉದ್ಯೋಗ ಕೈಗೊಳ್ಳುವ ಬಗ್ಗೆ ಮಾಹಿತಿ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.