​ದೇವಾಲಯ ಹಾಗು ವಿದ್ಯಾಲಯ ಆರ್ಥಿಕ ಸಂಕಷ್ಟದಲ್ಲಿದೆ~ ವಕೀಲ ಪ್ರದೀಪ್ ಕುಮಾರ್  

ಕರೋನ ಸಂಕಷ್ಠದಿಂದಾಗಿ ಇಡೀ ಭಾರತವೇ ಆರ್ಥಿಕ ಸಂಷ್ಟದಲ್ಲಿದೆ.  ಅದರಲ್ಲೂ  ದೇವಾಲಯ ಹಾಗು ವಿದ್ಯಾಲಯ ತುಂಬಾ ಸಂಕಷ್ಟದಲ್ಲಿದೆ. ಯಾವ ರಾಜಕೀಯದವರಿಗೂ  ಎರಡು ಕ್ಷೇತ್ರಗಳ ಬಗ್ಗೆ ಚಿಂತೆ ಇಲ್ಲ. ಸರಕಾರ ಯಾವುದೇ ಅನುದಾನ ನೀಡುವುದಿಲ್ಲ ಎಂದು  ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಹಾಗು ಖ್ಯಾತ ವಕೀಲ ಪ್ರದೀಪ್ ಕುಮಾರ್ ಅಭಿಪ್ರಾಯ ಪಟ್ಟರು. 
ಅವರು ಶನಿವಾರದಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉಪನ್ಯಾಸಕರು ಹಾಗು ಮಾಧ್ಯಮ ಸಂವಾದದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು. ಅನುದಾನ ರಹಿತ ಶಿಕ್ಷಕರ ಕಡೆ ಯಾವ ಸರಕಾರವು ಗಮನ ಕೊಡುತ್ತಿಲ್ಲ. ಇನ್ನಾದರೂ ಶಿಕ್ಷಣ ಸಂಸ್ಥೆಗಳಿಗೆ ಗರಿಷ್ಠ ನೆರವು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು. 
ಈ ಸಂದರ್ಭದಲ್ಲಿ ಅದಮಾರು  ಪೂರ್ಣಪ್ರಜ್ಞ ಕಾಲೇಜಿನ ಎಂ ಆರ್ ಪೈ, ಉಪಪ್ರಾಂಶುಪಾಲೆ ವಲ್ವಿಟಾ ಡಿಸೋಜಾ ,  ಉಡುಪಿ ಪೂರ್ಣಪ್ರಜ್ಞಕಾಲೇಜಿನ ಉಪಪ್ರಾಂಶುಪಾಲ ಗುರುರಾಜ, ಉಭಯ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. 
 ಉಡುಪಿ ಪೂರ್ಣಪ್ರಜ್ಞಕಾಲೇಜಿನ ಉಪಪ್ರಾಂಶುಪಾಲೆ ಪ್ರತಿಮಾ ಬಾಳಿಗ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ಜೈ ಶಂಕರ್ ವಂದಿಸಿದರು.   
 
 
 
 
 
 
 
 
 
 
 

Leave a Reply