SKPA ಮಂಗಳೂರು ವಲಯದ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆ

SKPA ಮಂಗಳೂರು ವಲಯದ ವತಿಯಿಂದ ನವೆಂಬರ್ 14ರಂದು ಸಂಜೆ ನಡೆದ ಮಕ್ಕಳ​ ​ದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆಯ​ನ್ನು ಜಿಲ್ಲಾಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ರವರು ಉದ್ಘಾಟಿಸಿದರು. ಪ್ರಸ್ತುತ ವರ್ಷದ SSLC ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಲಯದ ಸದಸ್ಯರಾದ ರಾಜ್ ಕುಂದರ್ ಇವರ ಪುತ್ರ ನೀಲ್ ಕುಂದರ್  ಹಾಗೂ PUC ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ರಮೇಶ್ ಪೂಜಾರಿಯವರ ಪುತ್ರಿ ವಿಶ್ಮಿತಾ ಇವರಿಗೆ ವಲಯದ ವತಿಯಿಂದ ವಿದ್ಯಾನಿಧಿ ನೀಡಿ ಗೌರವಿಸಲಾಯಿತು. 
ಮಕ್ಕಳ ದಿನಾಚರಣೆಯ ಆಯೋಜಿಸಿದ ವಲಯಮಟ್ಟದ “ಮುದ್ದುಕಂದ” ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಕಂದಮ್ಮಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ – ಪ್ರಣವಿ. ಎಸ್ (ಛಾಯಾಗ್ರಾಹಕ-ಸುಕೇಶ್ ಗುರುಪುರ, ದ್ವಿತೀಯ -ದಿಶಾನಿ ಎಸ್ (ಛಾಯಾಗ್ರಾಹಕ-ಶ್ರೀಕಾಂತ್ ತಿಲಕ್) ​ ಬಳಿಕ ಸದಸ್ಯರೆಲ್ಲರೂ ಸೇರಿ  ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ರಂಗೋಲಿಯದೀಪಬೆಳಗಿಸಿ,  ಪಟಾಕಿ ಹೊತ್ತಿಸಿ ಸಂಭ್ರಮದಿಂದ ಆಚರಿಸಲಾಯಿತು. 
 
ಕಾರ್ಯಕ್ರಮದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಅಡ್ಯಾರ್, ಅಜಯ್ ಕುಮಾರ್, ವಲಯಧ್ಯಕ್ಷ ಮಧುಮಂಗಳೂರು , ಉಪಾಧ್ಯಕ್ಷರಾದ ವಸಂತ್ ರಾವ್, ಕಾರ್ಯದರ್ಶಿ ಶ್ರೀಕಾಂತ್ ತಿಲಕ್, ನವೀನ್ ಕೋಡಿಕಲ್ , ಖಜಾಂಚಿ ಮುಕೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಲೋಕೇಶ್, ಪದ್ಮನಾಭ ಸುವರ್ಣ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.​​
 
 
 
 
 
 
 
 
 
 
 

Leave a Reply