ರೋಟರಿ ಉಡುಪಿ ಮತ್ತು ಮಣಿಪಾಲ ಟೌನ್ ಕ್ಲಬ್ ಗಳಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ಕೋವಿಡ್ ರೋಗಿಗಳ ಉಪಯೋಗಕ್ಕಾಗಿ 125 ಪಲ್ಸ ಆಕ್ಸಿಮೀಟರ್ಸ ಕೊಡುಗೆ 

ರೋಟರಿ ಉಡುಪಿ ಮತ್ತು ಮಣಿಪಾಲ ಟೌನ್ ಕ್ಲಬ್ ಗಳಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ಕೋವಿಡ್ ರೋಗಿಗಳ ಉಪಯೋಗಕ್ಕಾಗಿ 125 ಪಲ್ಸ ಆಕ್ಸಿಮೀಟರ್ಸ ನ್ನು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ರವರಿಗೆ ರೋಟರಿ ಜಿಲ್ಲಾ ಗವರ್ನರ್ ರೋ.ರಾಜರಾಮ ಭಟ್ ರವರು ಹಸ್ತಾಂತರಿಸಿದರು.

ಉಪಕರಣ ವನ್ನು ಸ್ವೀಕರಿಸಿದ ಡಾ. ನವೀನ್ ಭಟ್ ಅವರು ರೋಟರಿಯ ಈ ಕೊಡುಗೆಯು ಬಹಳ ಉಪಯುಕ್ತ ಎಂದು ಅಭಿನಂದಿಸಿ, ಈ ಅಭಿಯಾನದಲ್ಲಿರೋಟರಿಯಿಂದ ಇನ್ನಷ್ಟು ಬಾಗವಹಿಸು ವಿಕೆಯ ಬಗ್ಗೆ ತಿಳಿಸಿ, ಉಡುಪಿ ಜಿಲ್ಲೆಯಲ್ಲಿ ರೋಟರಿಯನ್ನು ನೋಡಲ್ ಸ್ವಯಂ ಸೇವಾಸಂಸ್ಥೆ ಯೆಂದು ನಿಯಮಿಸಿದ್ದು ಅವರಿಂದ ಉತ್ತಮ ಕಾರ್ಯನಡೆಯುತ್ತಿದೆ ಎಂದು ತಿಳಿಸಿದರು.

ಈ ಕಾರ್ಯ ಕ್ರಮದಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ರೋ.ಡಾ. ಸುರೇಶ ಶೆಣೈ, ರೋಟರಿ ಕೋವಿಡ್ ನೋಡಲ್ ಆಫೀಸರ್ ರೋ.ಡಾ. ಪ್ರಭಾಕರ ಮಲ್ಯ, ರೋಟರಿ ಉಡುಪಿಯ ಅದ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ, ಮಣಿಪಾಲ ಟೌನ್ ಅದ್ಯಕ್ಷ ರೋ.ರವೀಂದ್ರನಾಥ ನಾಯಕ್, ರೋ.ಬಿ.ವಿ.ಲಕ್ಷ್ಮೀನಾರಾಯಣ, ರೋ. ರಾಮಚಂದ್ರ ಉಪಾಧ್ಯಾಯ, ರೋ.ಗಣೇಶ್ ನಾಯಕ್ ಮತ್ತಿತರ ರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply