ಪರ್ಕಳ ಹಿರೇಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕೋವಿಡ್ ಸೋಂಕಿತರಿಗೆ ಸಂಬಂಧ ಪಟ್ಟ ಔಷಧಿಗಳನ್ನು ವಿತರಣೆ 

 ಭಗಿನಿ ಮಹಿಳಾ ಮಂಡಳಿ ಪರ್ಕಳ ಮತ್ತು ರೋಟರಿ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ರವರ ನೇತೃತ್ವದಲ್ಲಿ ಗುರುವಾರ ಪರ್ಕಳ ಹಿರೇಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕೋವಿಡ್ ಸೋಂಕಿತರಿಗೆ ಸಂಬಂಧ ಪಟ್ಟ ಸುಮಾರು ಇಪ್ಪತೈದು ಸಾವಿರ ರೂಪಾಯಿ ಮೌಲ್ಯದ ಔಷಧಿಗಳನ್ನು ವಿತರಿಸಲಾಯಿತು. 
 
ಪರ್ಕಳ ರೋಟರಿ ಅಧ್ಯಕ್ಷೆ ಗೀತಾಶ್ರೀ ಉಪಾಧ್ಯ, ರೋಟರಿ ಮಾಜಿ ಸಹಾಯಕ ಗವರ್ನರ್ ಮಂಜು ನಾಥ್ ಉಪಾಧ್ಯ, ಅರೋಗ್ಯ ಸಹಾಯಕಿಯರಾದ ಹರಿಣಾಕ್ಷಿ ಮತ್ತು ದಾವಲಬಿ ರುಸ್ತುಮ್, ಆಶಾ ಕಾರ್ಯರ್ತೆಯರಾದ ಮಂಜುಳಾ, ಸುಗುಣ, ಆಶಾ, ಮೀನಾಕ್ಷಿ, ಶೋಭಾ ಮತ್ತು ಸಂಸ್ಥೆಗಳ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು
 
 
 
 
 
 
 
 
 
 
 

Leave a Reply