ಬೆಂಗಳೂರು : ಕೋರೋನಾ ಸಂಕಷ್ಟದ ನಡುವೆ ಸಿಎಂ ಯಡಿಯೂರಪ್ಪ ಬುಧವಾರವಷ್ಟೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದರಲ್ಲಿ ಅರ್ಚಕರಿಗೆ ಅನುದಾನ ನೀಡುವ ಬಗೆಗೆ ಉಲ್ಲೇಖಿಸಿರಲಿಲ್ಲ. ಆದರೆ, ಈಗ ಅರ್ಚಕ ವಲಯಕ್ಕೆ ಶುಭ ಸುದ್ದಿ ಸಿಕ್ಕಿದೆ.
ಮುಜರಾಯಿ ಇಲಾಖೆಯ 27 ಸಾವಿರ ದೇವಾಲಯಗಳ ಅರ್ಚಕರಿಗೆ ಮೂರು ತಿಂಗಳ ಮುಂಗಡ ತಸ್ತಿಕ್ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರದಿಂದ ಒಟ್ಟು 4.50 ಕೋಟಿ ವರ್ಷಾಸನ ಬಿಡುಗಡೆಯಾಗಲಿದೆ. ಅನುದಾನದೊಂಇಗೆ 1500 ರೂ.ಬೆಲೆಯ ಆಹಾರ ಕಿಟ್ ವಿತರಿಸಲಾಗುವುದು. 50 ಸಾವಿರ ಅರ್ಚಕರಿಗೆ ಆಹಾರ ಕಿಟ್ ವಿತರಿಸಲು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.