ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ 6ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಉಡುಪಿ ಹಾಗೂ ಸೋದೆ ವಾದಿರಾಜ ಮಠ, ಉಡುಪಿ ಇವರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ತೆಂಕುತಿಟ್ಟು ಯಕ್ಷಗಾನ ಅಧ್ಯಯನ ಕೇಂದ್ರ ಇದರ 6ನೇ ವರ್ಷದ ವಾರ್ಷಿಕೋತ್ಸವವು ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ, 18 ನವೆಂಬರ್ 2023ರ ಮದ್ಯಾಹ್ನ 3ಗಂಟೆಯಿಂದ ಜರುಗಲಿದೆ.

ಈ ಪ್ರಯುಕ್ತ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು – ಪ್ರಸಿದ್ಧ ಭಾಗವತರು, ವಿಧ್ವಾನ್ ಕೆ ಚಂದ್ರಶೇಖರ ನಾವಡ- ನಿರ್ದೇಶಕರು, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಮತ್ತು ಶ್ರೀ ಶಶಿಕಾಂತ್ ಭಟ್- ಯಕ್ಷಗಾನ ಪ್ರೋತ್ಸಾಹಕರು ಇವರು ಪಾಲ್ಗೊಳ್ಳಲಿದ್ದಾರೆ. ಯಕ್ಷ ಗುರು ಶ್ರೀ ರಾಕೇಶ್ ರೈ ಅಡ್ಕ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ಸಂಯೋಜಕರಾದ ಶ್ರೀಮತಿ ಗೋಪಿಕಾ ಮಯ್ಯ ಉಪಸ್ಥಿತರಿರುವರು. ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಶಿಷ್ಯಂದಿರಿಂದ ಮದ್ಯಾಹ್ನ 3 ಗಂಟೆಯಿಂದ ‘ಏತದ್ಧಿ ರಾಮಾಯಣಂ’ ಎಂಬ ಯಕ್ಷಗಾನ ಪ್ರದರ್ಶನ ಇರುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಪ್ರತಿಷ್ಠಾನದ ಸಂಯೋಜಕರು , ವಿದ್ಯಾರ್ಥಿಗಳು ಮತ್ತು ಪೋಷಕರು ಬಯಸಿದ್ದಾರೆ. ಈ ಕಾರ್ಯಕ್ರಮವು ಮಲ್ಯಾಡಿ ಲೈವ್ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.

ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನವು 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೆಂಕುತಿಟ್ಟು ಯಕ್ಷಗಾನ ತರಬೇತಿಯನ್ನು ಸಮರ್ಥ ಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಮೂಲಕ ಉಚಿತವಾಗಿ ನೀಡುತ್ತಿದೆ. ಪ್ರತಿಷ್ಠಾನದ ಈ ಸತ್ಕಾರ್ಯಕ್ಕೆ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ಶ್ರೀಪಾದರು ತಮ್ಮ ಮಠದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟು ಈ ಕಾರ್ಯವನ್ನು ಪೋಷಿಸುತ್ತಾ ಬಹುವಾಗಿ ಅನುಗ್ರಹಿಸುತ್ತಿದ್ದಾರೆ. ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ವತಿಯಿಂದ ಕೋರಲಾಗಿದೆ.

 
 
 
 
 
 
 
 
 
 
 

Leave a Reply