ಉಡುಪಿ: ಮರ್ಡರ್ ಕೇಸ್ ಸ್ಥಳ ಮಹಜರು ವೇಳೆ ಆರೋಪಿಯ ಮೇಲೆ ದಾಳಿಗೆ ಯತ್ನ. ಪೊಲೀಸರಿಂದ ಲಘು ಲಾಠಿಚಾರ್ಜ್

ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ ಘಟನೆ:   ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಚರ್ಚೆಗೆ ಕಾರಣವಾಗಿದೆ.  ನೆಜಾರು ಕುಟುಂಬದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ರೋಚಕ ಮಾಹಿತಿಗಳು ಹೊರ ಬಿದ್ದಿವೆ.  ಇದರ ಬೆನ್ನಲ್ಲೇ ಆರೋಪಿಯನ್ನು ಸ್ಥಳ ಮಹಜರು ಮಾಡಲು ಹತ್ಯೆಯಾದ  ಮನೆಗೆ ಕರೆತಂದಿದ್ದಾರೆ.
ಬೆಳಗ್ಗೆಯಿಂದಲೇ ಘಟನೆಗೆ ಆರೋಪಿಯನ್ನು ಸ್ಥಳ ಮಹಜರು ಮಾಡಿಸಲು ಸ್ಥಳಕ್ಕೆ  ಬರುವುದಾಗಿ ಹೇಳಲಾಗಿತ್ತು.  ಆದರೆ ಸಂಜೆ 4:30ಕ್ಕೆ ಆರೋಪಿಯನ್ನು ಕರೆತರಲಾಗಿತ್ತು.  ಈ ಎಲ್ಲಾ ಪ್ರಕ್ರಿಯೆ ನಡೆಯುವ ಸಂದರ್ಭ ಹಸೀನಾ ಅವರ ಪತಿ ಕುಸಿದು ಬಿದ್ದಿರುವ ಘಟನೆ ಕೂಡ ನಡೆಯಿತು.  ಬೆಳಗಿನಿಂದಲೇ ಜನ ಆರೋಪಿಯನ್ನು ನೋಡಲು ನಿಂತಿದ್ದರು.
ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಚೌಗುಲೆ ವಿಚಾರಣೆ ಸಂದರ್ಭ ತಪ್ಪು ಕೊಂಡಿದ್ದಾನೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ತಿಳಿಸಿದ್ದಾರೆ.
 ಈ ಹತ್ಯೆ ಪ್ರಕರಣದ ತನಿಖೆ ಸಂಬಂಧಿಸಿದಂತೆ ಆರೋಪಿಯನ್ನು ಸ್ಥಳಮಹಜರು ಮಾಡಲು ಕರೆತಂದ ಸಂದರ್ಭ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.  ಈ ಕೃತ್ಯದಲ್ಲಿ ಭಾಗಿಯಾದ ಆರೋಪಿ ಪ್ರವೀಣ್ ಚೌಗಲೆಯನ್ನು ಪೊಲೀಸರು ಬಿಗಿ ಬಂದೋಬಸ್ ನಲ್ಲಿ ಕಪ್ಪು ವಸ್ತ್ರದಲ್ಲಿ ಮುಖ ಕಾಣದಂತೆ ಹತ್ಯೆ ಆದ ಮನೆಗೆ ಕರೆತಂದಿದ್ದಾರೆ.
 ಪೊಲೀಸರು ಆರೋಪಿಯನ್ನು ಕರೆತಂದ ಸಂದರ್ಭ ಆತನನ್ನು ನೋಡಲು ಜನರು ತಿಕ್ಕಿರೆದು ತುಂಬಿದ್ದರು. ಆರೋಪಿಯನ್ನು ಮನೆಗೆ ಕರೆದೊಯ್ಯುತ್ತಿದ್ದ  ಸಂದರ್ಭ ಕೆಲವರು ಬ್ಯಾರಿಕೇಡ್  ದಾಟಿ ಆರೋಪಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದ್ದು,  ಪೊಲೀಸರು ಈ ಸಂದರ್ಭ ಲಘು ಲಾಟಿಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
 ಈ ಸಂದರ್ಭ ಸ್ಥಳೀಯರು ಪೊಲೀಸ್ ಸಿಬ್ಬಂದಿಗಳಲ್ಲಿ ಬೇಡಿಕೆ ಇಟ್ಟಿದ್ದು ಕೇವಲ ಎರಡು ನಿಮಿಷಗಳ ಕಾಲ ಆರೋಪಿಯನ್ನು ತಮಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಈ ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿಸುವಂತೆ ಪ್ರತಿಭಟನೆ ಕೂಡ ನಡೆಸಿದ್ದಾರೆ.
 
 
 
 
 
 
 
 
 
 
 

Leave a Reply