ತುಳುಕೂಟ ಉಡುಪಿ ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ-2023

ಉಡುಪಿ: ತುಳುಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ತುಳು ಕವಿ ದಿ| ನಿಟ್ಟೂರು ಸಂಜೀವ ಭoಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆಯು ನ.26ರಂದು ಬೆಳಗ್ಗೆ 9.00 ಗಂಟೆಗೆ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ.
1ರಿಂದ 5ನೇ ತರಗತಿಯವರಿಗೆ ಬಾಲ ವಿಭಾಗ, 6ರಿಂದ 10ನೇ ತರಗತಿಯವರಿಗೆ ಕಿರಿಯ ವಿಭಾಗ, ಕಾಲೇಜು ವಿದ್ಯಾರ್ಥಿಗಳಿಗೆ ಹಿರಿಯ ವಿಭಾಗ, 25 ವರ್ಷದ ಮೇಲಿನವರಿಗೆ ಸಾರ್ವಜನಿಕ ವಿಭಾಗ ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ. ಪ್ರತಿಯೊಬ್ಬರಿಗೂ ಕೇವಲ ಮೂರು ನಿಮಿಷದ ತುಳು ಭಾವಗೀತೆ ಹಾಡಲು ಅವಕಾಶವಿದ್ದು, ಶ್ರುತಿ ಪೆಟ್ಟಿಗೆಯನ್ನು ಮಾತ್ರ ಬಳಸಿಕೊಳ್ಳಬಹುದು. ತುಳು ಭಾಷೆಯ ಹಿರಿಯ, ಕಿರಿಯ ಸಾಹಿತಿಗಳ ರಚನೆ ಹಾಗೂ ಸ್ವರಚಿತ ತುಳುಭಾವಗೀತೆಗಳನ್ನು ಹಾಡಲು ಆದ್ಯತೆ ನೀಡಲಾಗುವುದು.
ಸ್ಫರ್ಧಿಗಳು ಹಾಡಿನ ನಕಲು ಪ್ರತಿಗಳನ್ನು ಸ್ಪರ್ಧೆಯ ದಿನ ಸಂಘಟಕರಿಗೆ ನೀಡುವುದು ಕಡ್ಡಾಯ. ಪ್ರತಿ ವಿಭಾಗದಲ್ಲಿ ಪ್ರಥಮ – ರೂ. 1000/- ನಗದು + ಪ್ರಶಸ್ತಿ ಫಲಕ, ದ್ವಿತೀಯ – ರೂ. 750/- ನಗದು + ಪ್ರಶಸ್ತಿ ಫಲಕ, ತೃತೀಯ – ರೂ. 500/-ನಗದು + ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಆಸಕ್ತ ಸ್ಪರ್ಧಿಗಳು ನ.24ರ ಒಳಗಾಗಿ ತಮ್ಮ ಹೆಸರನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಅಥವಾ ವಾಟ್ಸಪ್ ಮೂಲಕ  ನೋಂದಾಯಿಸಬಹುದು. (ನೋಂದಣಿಗಾಗಿ ಸಂಪರ್ಕ ಸoಖ್ಯೆ:9844328177, 9449367595, 8277653062) ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್, ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕ ಜಯರಾಮ್ ಮಣಿಪಾಲ್, ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply