ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಲಾಯಿತು. ಈ ಪ್ರಯುಕ್ತ ಹಿರಿಯ ಛಾಯಾಗ್ರಾಹಕರಾದ ಶ್ರೀ ರಂಗನಾಥ ಸರಳಾಯ ಇವರನ್ನು ಅವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸ ಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀ ರಂಗನಾಥ ಸರಳಾಯ ಅವರು ಮಾತನಾಡುತ್ತಾ ಛಾಯಾಗ್ರಹಣ ಕ್ಷೇತ್ರದ ಗುರುಗಳಾದ ಶ್ರೀ ದಿನಕರ್ ರಾವ್ ಅವರನ್ನು ನೆನೆಯುತ್ತಾ ಅವರ ಆಶೀರ್ವಾದದಿಂದ ಮತ್ತು ಸಮರ್ಥ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಏರಲು ಸಹಾಯವಾಗಿದೆ.

ವಿಪ್ರ ಸಂಘಟನೆಗಳಿಂದ ಮತ್ತು ಸರ್ವರ ಸಹಕಾರದಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಗುರುತಿಸುವಂತಹ ಸೇವೆ ಸಲ್ಲಿಸಲು ಸಹಕಾರ ವಾಯಿತು ಎಂದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಜನಾರ್ಧನ್ ಕೊಡವೂರು ಅವರು ಮಾತನಾಡುತ್ತಾ ಓರ್ವ ಛಾಯಾಗ್ರಾಹಕ ನಾದವನು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಸಮಾಜದಲ್ಲಿ ಸರ್ವರ ಪ್ರೀತಿ, ಅಭಿಮಾನ ಗಳಿಸಿ ಸಾಧನೆ ಮಾಡಲು ಸಾಧ್ಯವಿದೆ.

ಇಂತಹ ಗುಣಗಳನ್ನು ಮೈಗೂಡಿಸಿಕೊಂಡು ಛಾಯಾಚಿತ್ರ ಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಶ್ರೀ ರಂಗನಾಥ ಸರಳಾಯ ಅವರನ್ನು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಗುರುತಿಸಿ ಸನ್ಮಾನಿಸಿರುವುದು ಬಹಳ ಸಮಂಜಸವಾಗಿದೆ ಎಂದು ಅಭಿ ಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಮೋಹನ ಉಡುಪ ಹಂದಾಡಿ, ಕೆ.ರಘುಪತಿ ರಾವ್, ಚಂದ್ರಕಾಂತ ಕೆ.ಎನ್., ರಮೇಶ್ ಭಟ್ ಮೂಡಬೆಟ್ಟು, ಮುರಳಿ ಅಡಿಗ, ನಾಗರಾಜ ಭಟ್, ರಂಗನಾಥ ಸಾಮಗ, ವೇದವ್ಯಾಸ ಆಚಾರ್ಯ, ಹಂಸ ನಂದಿನಿ ಸರಳಾಯ, ಪೂರ್ಣಿಮಾ ಜನಾರ್ಧನ್, ಪ್ರಜ್ಞಾ ಕೊಡ ವೂರು ಮತ್ತು ರಂಗನಾಥ ಸರಳಾಯ ಅವರ ಮನೆಯವರು ಉಪಸ್ಥಿತರಿದ್ದರು. ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್. ವಂದನಾರ್ಪಣೆಗೈದರು.

 
 
 
 
 
 
 
 
 
 
 

Leave a Reply