ಪರ್ಕಳ ರೋಟರಿಯಿಂದ ಹರ್ ಘರ್ ತಿರಂಗಾ ಅಭಿಯಾನ

ಭಾರತದ ಸ್ವಾತಂತ್ರದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಪ್ರಧಾನ ಮಂತ್ರಿಯವರ ಆಶಯದಂತೆ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ 04.08.2022 ರಂದು ಪೂರ್ವಾಹ್ನ 11.30ಕ್ಕೆ ಸರಿಯಾಗಿ ಪರ್ಕಳ ಪ್ರೌಢ ಶಾಲೆ ಸುವರ್ಣ ಸೌಧ ಸಭಾಭವನದಲ್ಲಿ ರೋಟರಿ ಪರ್ಕಳ, ಪರ್ಕಳ ಎಜುಕೇಶನ್ ಸೊಸೈಟಿ, 80 ಬಡಗುಬೆಟ್ಟು ಗ್ರಾಮ ಪಂಚಾಯತ್, ಉಡುಪಿ ನಗರ ಸಭೆ, ಉಡುಪಿ ತಾಲೂಕು ಸಹಕಾರ ಭಾರತಿ ವತಿಯಿಂದ ಜರುಗಿತು.

ಸಭೆಯ ಅಧ್ಯಕ್ಷತೆ ಯನ್ನು ರೋಟರಿ ಪರ್ಕಳದ ಅಧ್ಯಕ್ಷರಾದ ರೋ.ದಿನೇಶ್ ಹೆಗ್ಡೆ ಆತ್ರಾಡಿಯವರು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ರೋ.ಡಾ. ಜಯ ಗೌರಿ ಎಚ್. ನೆರವೇರಿಸಿ ರೋಟರಿ ಜಿಲ್ಲೆ 3182 ಎಲ್ಲಾ ಕ್ಲಬ್ಗಳ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರುಗಳಿಗೆ ಮತ್ತು ಸಾರ್ವಜನಿಕರಿಗೆ ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಎಲ್ಲರ ಮನೆ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕಾಗಿ ವಿನಂತಿಯನ್ನು ಮಾಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಆರ್ ನಾಯಕ್, ಪೌರಾಯುಕ್ತ ಶ್ರೀ ಉದಯ ಕುಮಾರ ಶಟ್ಟಿ, ಪರ್ಕಳ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರಾದ ರೋ.ಬಿ. ಅರುಣಾಚಲ ಹೆಗ್ಡೆ, ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಧವಿ ಎಸ್ ಆಚಾರ್ಯ, ಸದಸ್ಯ ರೋ.ಶುಭಕರ ಶೆಟ್ಟಿ, ರೋಟರಿ ವಲಯ ಸೇನಾನಿ ರೋ.ದಯಾನಂದ ನಾಯಕ್ ಪರ್ಕಳ ರೋಟರಿಯ ಕಾರ್ಯದರ್ಶಿ ರೋ.ರವೀಂದ್ರ ಆಚಾರ್ಯ ಹಾಗೂ ವೇದಿಕೆಯಲ್ಲಿ ಇತರ ಗಣ್ಯ ರೊಂದಿಗೆ ಸಹಕಾರ ಭಾರತಿಯ ಕಾರ್ಯದರ್ಶಿ ಪಾಂಡುರಂಗ ಕಾಮತ್ ರವರು ಭಾಗವಹಿಸಿದ್ದರು. ಮತ್ತು ಸಂಘಟನಾ ಕಾರ್ಯದರ್ಶಿ ಡಾ. ಬಾಲಕೃಷ್ಣ ಮದ್ದೋಡಿ ಮತ್ತು ರೋಟರಿ ಸದಸ್ಯರುಗಳು ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಇತರ ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply