ಮಲ್ಪೆ: ಮಲ್ಪೆ ಅಂಬೇಡ್ಕರ್ ಯುವ ಸೇನೆ ವತಿಯಿಂದ ಮಲ್ಪೆ ಸಿಟಿಜನ್ ಸರ್ಕಲ್ ನಿಂದ ತೊಟ್ಟಂ ಚರ್ಚ್ ವರೆಗಿನ ದಾರಿ ದೀಪ ದುರಸ್ತಿಗೆ ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ವತಿಯಿಂದ ದೊಂದಿ ಬೆಳಕಿನ ಪ್ರತಿಭಟನೆ ಶನಿವಾರ ಸಂಜೆ ನಡೆಯಿತು.
ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾ ಜಯನ್ ಮಲ್ಪೆ ಇದು ಕೇವಲ ದಲಿತರ ನೋವಲ್ಲ ಬದಲಾಗಿ ಪ್ರತಿಯೊಬ್ಬ ಸಾರ್ವ ಜನಿಕರಿಗೆ ದಾರಿದೀಪ ಇಲ್ಲದೆ ಸಮಸ್ಯೆಯಾಗುತ್ತಿದೆ. ಕಳದೆ ಒಂದು ವರ್ಷದಿಂದ ದಾರಿದೀಪಗಳನ್ನು ನಿರ್ವಹಣೆ ಮಾಡದೆ ನಗರಸಭೆಯ ಅಧಿಕಾರಿಗಳು ನಿಷ್ಕ್ರೀಯವಾಗಿದ್ದಾರೆ.
ಹಲವಾರು ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರು ಕತ್ತಲೆಯಲ್ಲಿ ಡಿವೈಡರ್ ಗೆ ತಾಗಿ ಬಿದ್ದು ಗಾಯಗೊಂಡಿದ್ದಾರೆ. ಇದೊಂದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿದ್ದು ಈ ವ್ಯವಸ್ಥೆ ಸರಿಯಾಗದೆ ಹೋದಲ್ಲಿ ಮುಂದೆ ನಗರಸಭೆಯ ಎದುರು ಉಗ್ರವಾದ ಹೋರಾಟ ನಡೆಸ ಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲಿಯಾನ್, ಮಲ್ಪೆ ಪ್ರಧಾನ ಶಾಖೆಯ ಅಧ್ಯಕ್ಷ ಕೃಷ್ಣ ನೆರ್ಗಿ, ಗೌರವ ಅಧ್ಯಕ್ಷ ಪ್ರಸಾದ್ ನೆರ್ಗಿ, ಸುಂದರ ಕಪ್ಪೆಟ್ಟು, ಗಣೇಶ್ ನೆರ್ಗಿ, ರಮೇಶ್ ಪಾಲ್, ಸುರೇಶ್ ತೊಟ್ಟಂ, ಗುಣವಂತ, ಭಗವಾನ್ ದಾಸ್ ಹಾಗೂ ಹಿರಿಯ ಮುಖಂಡರು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು