ಯಶಸ್ವಿಯಾಗಿ ನೆರವೇರಿದ ಕಡಿಯಾಳಿ ಧ್ವಜಸ್ತಂಭ ಎಣ್ಣೆ ಸಮರ್ಪಣಾ ಕಾರ್ಯಕ್ರಮ

ಉಡುಪಿ: ಸಮಗ್ರವಾಗಿ ಜೀರ್ಣೋದ್ಧಾರಗೊಂಡು ವೈಭವದಿಂದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಕೊಡಿ ಮರದ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಣಾ ಕಾರ್ಯಕ್ರಮವು ದೇಗುಲದ ಪ್ರಧಾನ ತಂತ್ರಿಗಳಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು ಮತ್ತು ಅರ್ಚಕರಾದ ಕೆ ರಾಧಾಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು. ಭಕ್ತರು, ಗ್ರಾಮಸ್ಥರು ಸೇರಿ186 ಲೀಟರ್ ಶುದ್ಧ ಸಾವಯವ ಎಳ್ಳೆಣ್ಣೆ ಸಮರ್ಪಿಸಿದರು. ಈ ಎಳ್ಳೆಣ್ಣೆ ಸಮರ್ಪಣಾ ಕಾರ್ಯಕ್ರಮವು ಅಗೋಷ್ಟ್ ತಿಂಗಳ 20 ತಾರೀಕಿನ ತನಕ ದೇಗುಲದಲ್ಲಿ ಅವಕಾಶ ಇರುವುದು. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಈ ಅವಕಾಶವನ್ನು ಸಮಸ್ತ ಗ್ರಾಮಸ್ಥರು ಸದುಪಯೋಗ ಪಡಿಸಿಕೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ ಹೆಗ್ಡೆ ಜನತೆಯಲ್ಲಿ ವಿನಂತಿಸಿದ್ದಾರೆ. ದೇವಸ್ಥಾನದ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ಕಟ್ಟೆ ರವಿರಾಜ ಆಚಾರ್ಯ, ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಪಿ ಶೆಟ್ಟಿ, ಸಮಾರಂಭದ ಅಧ್ಯಕ್ಷತೆ ಈ ಸಂದರ್ಭದಲ್ಲಿ ಧ್ವಜಸ್ತಂಭ ಪೀಠದ ದಾನಿಗಳಾದ ಶ್ರೀ ಸುಭಾಷ್ ಚಂದ್ರ ಹೆಗ್ಡೆ ಕಡಿಯಾಳಿ ,ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ನಿತ್ಯಾನಂದ ಕಾಮತ್ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಭಾಸ್ಕರ ಶೇರಿಗಾರ್ , ಶ್ರೀ ಸತೀಶ್ ಭಾಗವತ್ ,ಶ್ರೀಮತಿ ಪದ್ಮರತ್ನಾಕರ್, ಶ್ರೀರಾಮಚಂದ್ರ ಸನಿಲ್, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಯು ಮೋಹನ್ ಉಪಾಧ್ಯ,ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ನಾಗರಾಜ್ ಶೆಟ್ಟಿ, ಶ್ರೀ ಮಂಜುನಾಥ ಹೆಬ್ಬಾರ್, ಶ್ರೀ ಕಿಶೋರ್ ಸಾಲ್ಯಾನ್, ಶ್ರೀಮತಿ ಶಶಿಕಲಾ ಭರತ್, ಶ್ರೀಮತಿ ಸಂಧ್ಯಾ ಪ್ರಭು, ಶ್ರೀ ಗಣೇಶ ನಾಯ್ಕ, ಉಪಸ್ಥಿತರಿದ್ದು ಸಮಿತಿಯ ಸದಸ್ಯರುಗಳಾದ ಚೇತನ್ ಕುಮಾರ್ ದೇವಾಡಿಗ ಕಡಿಯಾಳಿ, ರಾಕೇಶ್ ಜೋಗಿ, ಸಂತೋಷ್ ಕಿಣಿ , ಅಶ್ವಥ್ ದೇವಾಡಿಗ,ದೇಗುಲದ ಅರ್ಚಕರು, ಗ್ರಾಮಸ್ಥರು, ಮತ್ತು ದೇಗುಲದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply