ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ (ರಿ) ವತಿಯಿಂದ ಬಡ ವ್ಯಾಪರಸ್ಥರಿಗೆ ದ್ವಿಚಕ್ರ ವಾಹನ ವಿತರಣೆ

ಉಡುಪಿ: ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ (ರಿ) ವತಿಯಿಂದ ಬಡ ವ್ಯಾಪರಸ್ಥರಿಗೆ ಝಕಾತ್ ನಿಧಿಯಿಂದ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಉಡುಪಿ ಜಾಮೀಯಾ ಮಸೀದಿಯಲ್ಲಿ ಜರುಗಿತು.

ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಾಮೀಯಾ ಮಸೀದಿಯ ಖತೀಬರಾದ ಮೌಲನ ಅಬ್ದುರ್ರಶೀದ್ ಉಮರಿ, “ಉದ್ಯೋಗ ಸೃಷ್ಟಿಸುವುದು, ಉದ್ಯೋಗ ಮಾಡುವುದು ಧರ್ಮ ಸಮ್ಮತ ಕಾರ್ಯ. ಬೇಡುವುದು ಇಸ್ಲಾಮಿನಲ್ಲಿ ಒಳ್ಳೆಯ ವಿಚಾರವಲ್ಲ. ಅತ್ಯಂತ ತುರ್ತು ಪರಿಸ್ಥಿತಿಯ ಹೊರತಾಗಿ ಬೇಡುವುದು ಸೂಕ್ತವಲ್ಲ. ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಉದ್ಯೋಗ ಸೃಷ್ಟಿಯ ಕೆಲಸ ಮಾಡುತ್ತಿದೆ. ಇದು ಅತ್ಯಂತ ‌ಪುಣ್ಯ ಕಾರ್ಯ. ಸ್ವಾವಲಂಬಿಯಾಗಿ ಕೆಲಸ ಮಾಡಿ ಬದುಕುವುದು‌ ಅತ್ಯಂತ ಒಳ್ಳೆಯ ವಿಚಾರವಾಗಿದೆ ಎಂದರು.

ತೋನ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಇದ್ರಿಸ್ ಹೂಡೆ ಮಾತನಾಡಿ, ಝಕಾತ್ ನ್ನು ಒಟ್ಟುಗೂಡಿಸಿ ಜನರಿಗೆ ತಲುಪಿಸುವ ಕಾರ್ಯ ಶ್ಲಾಘನೀಯ. ಇಸ್ಲಾಮಿನಲ್ಲಿ ಸಾಮೂಹಿಕತೆಗೆ ಹೆಚ್ಚು ಪ್ರಮುಖ್ಯತೆ ಇದೆ. ಸಾಮೂಹಿಕತೆ ಇಲ್ಲದ ಕಲ್ಪನೆ ಇಸ್ಲಾಮಿಲ್ಲಿ ಇಲ್ಲ. ಸಾಮೂಹಿಕ ಝಕಾತ್ ಸಂಗ್ರಹಕ್ಕೆ ಮುಸ್ಲಿಂ ‌ವೆಲ್ಫೇರ್ ಅಸೋಸಿಯೇಷನ್ ಮಾದರಿಯಾಗಿದೆ.

ಸ್ವ ಉದ್ಯೋಗಕ್ಕೆ ಇಸ್ಲಾಮಿನಲ್ಲಿ ಪ್ರಾಮುಖ್ಯತೆ ಇದ್ದು ಪ್ರವಾದಿ(ಸ) ಅವರು ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸಿದ್ದರು. ದ್ವಿಚಕ್ರ ವಾಹನದ ವಿತರಣೆಯು ಉದ್ಯೋಗ ಸೃಷ್ಟಿಗೆ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನೀಡುತ್ತಿರುವ ಕೊಡುಗೆಯಾಗಿದೆ ಎಂದರು.

ನಂತರ ಎಂಟು ಫಲಾನುಭವಿಗಳಿಗೆ ದ್ವಿಚಕ್ರ ವಾಹನವನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಇಕ್ಬಾಲ್ ಮನ್ನಾ ನಿರೂಪಿಸಿದರು. ರಿಯಾಝ್ ಕುಕ್ಕಿಕಟ್ಟೆ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಉಡುಪಿ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್,ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಅಬ್ದುಲ್ ಗಪ್ಫೂರ್ ಕಲ್ಯಾಣಪುರ, ಮುಸ್ಲಿಂ ಒಕ್ಕೂಟದ ಉಡುಪಿ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ ಕೋಟ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply