ರಾಷ್ಟ್ರೀಯ ಆಯುರ್ವೇದ ದಿನ 2022

ಈ ವರ್ಷದ ಆಯುರ್ವೇದ ದಿನವನ್ನು 23 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮದ ಅಡಿಯಲ್ಲಿ ಆಯುರ್ವೇದ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಈ ವರ್ಷದ ಥೀಮ್ ‘ಹರ್ ದಿನ್ ಹರ್ ಘರ್ ಆಯುರ್ವೇದ’. ಅಂದರೆ. ಪ್ರತಿ ದಿನ ಪ್ರತಿ ಮನೆಯಲ್ಲಿ ಆಯುರ್ವೇದ ಎಂಬುದು ಧೇಯವಾಕ್ಯವಾಗಿದೆ.

ಆಯುರ್ವೇದವು ಕೇವಲ ವೈದ್ಯಕೀಯ ವ್ಯವಸ್ಥೆಯಲ್ಲದೆ ಪ್ರಕೃತಿಯೊಂದಿಗಿನ ನಮ್ಮ ಸಹಜೀವನದ ಸಂಬಂಧದ ಅಭಿವ್ಯಕ್ತಿಯಾಗಿದೆ. ಇದರ ಮುಖ್ಯ ವಿಶೇಷತೆ ಏನೆಂದರೆ ರೋಗವನ್ನು ತಡೆಗಟ್ಟುವುದು ಮತ್ತು ಆರೋಗ್ಯವನ್ನು ಉತ್ತೇಜಿಸುವುದು ಎರಡಕ್ಕೂ ಸರಿಯಾದ ಪರಿಗಣನೆಯನ್ನು ನೀಡಲಾಗುತ್ತದೆ.
ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಸಹಯೋಗದಲ್ಲಿ ನಡೆಯಲಿದ್ದು, ಇದರಿಂದ ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಗೂ ಸಾಂಪ್ರದಾಯಿಕ ಔಷಧ ಪದ್ಧತಿಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆಯುರ್ವೇದದ ಸಂದೇಶವು ಎಲ್ಲಾ ಹಂತಗಳಿಗೂ ಹರಡುವಂತೆ ಜನರೊಂದಿಗೆ ಕೇಂದ್ರೀಕೃತವಾಗಿ ಸಂವಹನ ನಡೆಸಲು ಮತ್ತು ಸಂವೇದನಾಶೀಲಗೊಳಿಸಲು ಆರು ವಾರಗಳ ಅವಧಿಯ ಕಾರ್ಯಕ್ರಮವನ್ನು (12 ಸೆಪ್ಟೆಂಬರ್-23 ಅಕ್ಟೋಬರ್) ಪ್ರಾರಂಭಿಸಲಾಗಿದೆ.

ರಾಷ್ಟ್ರೀಯ ಆಯುರ್ವೇದ ದಿನದ ಲೋಗೋ
ರಾಷ್ಟ್ರೀಯ ಆಯುರ್ವೇದ ದಿನದ ಲೋಗೋ ಕೆಳಗಿನ ಅಂಶಗಳನ್ನು ಹೊಂದಿದೆ. ಲೋಗೋದ ಮಧ್ಯಭಾಗದಲ್ಲಿರುವ ಧನ್ವಂತರಿಯ ಪ್ರತಿಮೆ ಔಷಧಿಯ ಅಧಿಪತಿಯನ್ನು ಪ್ರತಿನಿಧಿಸುತ್ತದೆ.
ಲೋಗೋದಲ್ಲಿನ ಐದು ದಳಗಳು ಪಂಚ ಮಹಾಭೂತವನ್ನು ಸಂಕೇತಿಸುತ್ತವೆ ಮತ್ತು ಕೆಳಗಿನ ಮೂರು ವೃತ್ತಗಳು ಆಯುರ್ವೇದದ ಮೂಲಭೂತ ತತ್ವಗಳಾದ ವಾತ, ಪಿತ್ತ ಕಫಗಳನ್ನು ಸೂಚಿಸುತ್ತವೆ.
ಅಂಶಗಳನ್ನು ಸುತ್ತುವರಿದ ಅಂಡಾಕಾರದ ಎಲೆಯು ಈ ಮೂಲಭೂತ ತತ್ವಗಳ ಆಧಾರದ ಮೇಲೆ ಪ್ರಕೃತಿಯ ಮೂಲಕ ಗುಣಪಡಿಸುವ ಸಾರವನ್ನು ಚಿತ್ರಿಸುತ್ತದೆ. ಬನ್ನಿ ಧನ್ ತೇರೇಸ್ನ ಈ ಶುಭಸಂದರ್ಭದಲ್ಲಿ ಆಯುರ್ವೇದದ ಲ್ಲಿ ಹೇಳಿದ ದಿನಚರ್ಯ ಋತುಚರ್ಯ ಆಹಾರ, ವಿಹಾರ ಪಾಲಿಸುತ್ತ ಆರೋಗ್ಯ ಕಾಪಾಡಿಕೊಳ್ಳೋಣ ರೋಗ ಬಂದರೆ ಅಡ್ಡ ಪರಿಣಾಮವಿಲ್ಲದ ಆಯುರ್ವೇದ ಚಿಕಿತ್ಸೆ ಪಡೆಯುತ್ತ ನಮ್ಮ ದೇಶದ ಹೆಮ್ಮೆಯ ಆಯುರ್ವೇದದಿಂದ ಆಯುರಾರೋಗ್ಯ ಪಡೆಯೋಣ

ವಿಜಯ್ ನೆಗಳೂರ್
ಪ್ರಥಮ ಕ್ಲಿನಿಕ್ ಕೆಮ್ಮಣ್ಣು
ಪ್ರಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು
ಸ್ವಸ್ಥ ವೃತ್ತ ವಿಭಾಗ,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ, ಉದ್ಯಾವರ, ಉಡುಪಿ

 
 
 
 
 
 
 
 
 
 
 

Leave a Reply