ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆದಿದೆ~ ಸಬ್ ಇನ್ಸ್‌ಪೆಕ್ಟರ್ ಸಕ್ತಿವೇಲು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ನಾಯಕತ್ವ ಗುಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಲ್ಪೆ ವಲಯದ 14ಒಕ್ಕೂಟಗಳ ಪದಾಧಿಕಾರಿಗಳ ನಾಯಕತ್ವ ತರಬೇತಿ ಕಾರ್ಯಗಾರವನ್ನು ತೆಂಕನಿಡಿಯೂರು ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲ್ಪೆ ಪೋಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್
ಸಕ್ತಿವೇಲುರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆದಿದೆ ಎಂದರು.  
ಖಾವಂದರು ಈ ರೀತಿಯ ಕಾರ್ಯಕ್ರಮಗಳನ್ನು ಸಂಘಟನೆ ಮಾಡಿರುವುದರಿoದ ಸಮಾಜದ ಎಲ್ಲಾ ಮಹಿಳೆಯರಲ್ಲಿ ನಾಯಕತ್ವ ಗುಣ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ. ಅದೇ ರೀತಿ ಜನರು ಪೋಲೀಸ್ ಇಲಾಖೆಯ ಮೇಲೆ ಇರುವ ಭಯದ ವಾತಾವರಣ ಬಿಟ್ಟು ಸಮಾಜದ ಒಳಿತಿಗೋಸ್ಕರ ಇಲಾಖೆಯ ಸೌಲಭ್ಯವನ್ನು ಬಳಸಿಕೊಳ್ಳುವ ಬಗ್ಗೆಯೂ ಮಾಹಿತಿ ನೀಡಿದರು. 
ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀಯುತ ರೋಹಿತ್ ಹೆಚ್ ರವರು ಪದಾಧಿಕಾರಿಯವರು ಯೋಜನೆಯ ಶಕ್ತಿಯಾಗಿ, ನಮ್ಮ ಒಕ್ಕೂಟದ ಸಂಘಗಳ ಬಲವರ್ಧನೆಗೆ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ೨೦೨೦/೨೧ ನೇ ಸಾಲಿನ ಸಾಧಕ ಒಕ್ಕೂಟಗಳಿಗೆ ಅಭಿನಂದನಾಪತ್ರ ನೀಡಲಾಯಿತು. 
ವಲಯ ಅಧ್ಯಕ್ಷರಾದ ಆಶಾಲತಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯದ ಮೇಲ್ವಿಚಾರಕರಾದ ಶ್ರೀಮತಿ ಮೂಕಾಂಬಿಕಾ ಸ್ವಾಗತಿಸಿದರು. ಸೇವಾಪ್ರತಿನಿಧಿ ಉಮಾರವರು ವಂದಿಸಿದರು.
 
 
 
 
 
 
 
 
 
 
 

Leave a Reply