ಹೂಡೆಯ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮನೆ ಹಸ್ತಾಂತರ

ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಅರ್ಥಿಕವಾಗಿ ಹಿಂದುಳಿದಿದ್ದ ಬಡ ಕೊರಗ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು.ಜಮಾಅತೆ ಇಸ್ಲಾಮಿ ಹಿಂದ್’ನ ರಾಜ್ಯ ಕಾರ್ಯದರ್ಶಿ ಡಾ.ತಾಹ ಮತೀನ್ ಫಲಾನುಭವಿ ಶ್ರೀಮತಿ ಲತಾ ಅವರಿಗೆ ಕೀಲಿಗೈ ಹಸ್ತಾಂತರಿಸಿದರು.

ಮುಖ್ಯ ಅತಿಥಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಮಗಾಗಿ ನಾವು ಸುಂದರ ಮನೆ ಕಟ್ಟುವಾಗ ಮನೆಯಿಲ್ಲದವರಿಗೂ ಸುಂದರ ಮನೆಯಿರಲಿ ಎಂದು ಬಯಸುವುದು ನಿಜಕ್ಕೂ ಮಾದರಿ ಕಾರ್ಯವಾಗಿದೆ.ಸ್ವಯಂ ಜಾತಿಗೆ ಸೇವೆ ಮಾಡುತ್ತಿರುವಂತಹ ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನವರು ಜಾತಿ ಧರ್ಮ ಮೀರಿ ಸಹಾಯ ಮಾಡುತ್ತಿರುವುದು ಸ್ಪೂರ್ತಿದಾಯಕ ವಿಚಾರವಾಗಿದೆ ಎಂದರು. ಕಷ್ಟದಲ್ಲಿರುವವರ ಸೇವೆ ಮಾಡುತ್ತ ದೇವರಿಗೆ ನೀಡಬೇಕಾದ ಕೃತಜ್ಞತೆ ಸಲ್ಲಿಸುತ್ತಿದ್ದಾರೆಂದು ಪ್ರಮೋದ್ ಹೇಳಿದರು.

ಸುಂದರ್ ಮಾಸ್ತರ್, ಪ್ರೊ.ಡಾ.ಅಬ್ದುಲ್ ಅಝೀಝ್ ಮಾತನಾಡಿ ಶುಭ ಹಾರೈಸಿದರು. ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು.

ದಲಿತ ದಮನಿತ ಹೋರಾಟ ಸಮಿತಿಯ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ, ದಿನಕರ ಬೆಂಗ್ರೆ, ಪಂಚಾಯತ್ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಪಂಚಾಯತ್ ಸದಸ್ಯೆ ಸಂಧ್ಯಾ, ವಿಜಯ, ಮಮ್ತಾಝ್, ಸುಝಾನ್, ಕುಸುಮ, ವತ್ಸಲ, ಉಸ್ತಾದ್ ಹೈದರ್, ಡಾ.ಫಹೀಮ್, ತೋನ್ಸೆ ಪಂಚಾಯತ್ ಮಾಜಿ ಅಧ್ಯಕ್ಷೆ ಫೌಝೀಯಾ ಸಾದಿಕ್, ಉಸ್ತಾದ್ ಸಾದೀಕ್, ಎಸ್.ಐ.ಓ ನ ಹೂಡೆ ಘಟಕಾಧ್ಯಕ್ಷ ವಸೀಮ್, ಎಚ್.ಆರ್.ಎಸ್ ನ ಹಸನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply