ಹೇರೂರು ಶ್ರೀ ಗುರು ರಾಘವೇಂದ್ರ ಚಂಡೆ ಬಳಗದ ಉದ್ಘಾಟನಾ ಸಂಭ್ರಮ 

ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿ ಶ್ರೀನಿವಾಸ ಪ್ರಭು ಚಂಡೆ ಬಳಗವನ್ನು ಉದ್ಘಾಟಿಸಿ  ಗ್ರಾಮದಲ್ಲಿ ಉಚಿತವಾಗಿ ಚಂಡೆ ತರಬೇತಿಯನ್ನು ಪ್ರಾರಂಭಿಸಿ ಇಂದು ಗುರುವಂದನ ಕಾರ್ಯಕ್ರಮವನ್ನು ಮಾಡುತ್ತಿರುವುದಕ್ಕೆ ಶುಭ ಹಾರೈಸಿದರು. 
ಮಜೂರು ಗ್ರಾಮಪಂಚಾಯತ್  ಉಪಾಧ್ಯಕ್ಷ ಮಧುಸೂದನ ಸಾಲಿಯಾನ್ ರವರು ಎಸೆಸೆಲ್ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಚಂಡೆ ಬಳಗದ ಸದಸ್ಯರನ್ನು ಅಭಿನಂದಿಸಿದರು. 
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ದೇವಾಡಿಗ ಮಹಿಳಾ ಬಳಗದ ಅಧ್ಯಕ್ಷೆ ಶಶಿಕಲಾ ದೇವಾಡಿಗ ದೇವಾಡಿಗರ ಸಂಘದ ಶಂಕರ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂಡೆ ತರಬೇತಿ ನೀಡಿದ ಮುಲ್ಕಾಡಿ ಶ್ರೀ ರಾಘವೇಂದ್ರ ಭಟ್ ಇವರಿಗೆ ಚಂಡೆ ಬಳಗದ ವಿದ್ಯಾರ್ಥಿಗಳು ಫಲಪುಷ್ಪ ಗುರು ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. 

ಚೆಂಡೆ ಬಳಗದ ಅಧ್ಯಕ್ಷ ದಿನೇಶ್ ದೇವಾಡಿಗರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉಚಿತ ಚೆಂಡೆ ತರಬೇತಿಯನ್ನು ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. 
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲು ಸಹಕರಿಸಿದ ಹೊರದೇಶದಲ್ಲಿರುವ  ಶ್ರೀಪತಿ ಪ್ರಭು ಹೇರೂರು ಇವರಿಗೆ ಕೃತಜ್ಞತೆಯನ್ನು ಸಲ್ಲಿಸಿ,  ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದಲ್ಲಿ ಇದಕ್ಕಿಂತ ಉತ್ತಮ ಅಂಕಗಳನ್ನು ಗಳಿಸಿ ಒಳ್ಳೆಯ ಜೀವನ ನಡೆಸಲಿ ಎಂದು ಶುಭ ಹಾರೈಸಿದರು. 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೇರೂರು ಸೇವಾ ಪ್ರತಿನಿಧಿ ವಸಂತಿ ಆಚಾರ್ಯ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು ಚಂಡೆ ಬಳಗದ ವಿದ್ಯಾ ಆಚಾರ್ಯರವರು ಸನ್ಮಾನ ಪತ್ರ ವಾಚಿಸಿದರು.  ಕುಮಾರಿ ಪ್ರೀತಿ ಆಚಾರ್ಯರವರು ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಅಖಿಲ ದೇವಾಡಿಗ ರವರು ನಿರೂಪಿಸಿದರು. ಚಂಡೆ ಬಳಗದ ಕಾರ್ಯದರ್ಶಿ ಉದಯ ದೇವಾಡಿಗ ಧನ್ಯವಾದವಿತ್ತರು.  
 
 
 
 
 
 
 
 
 
 
 

Leave a Reply