ಉಡುಪಿ ಬಿಗ್ ಬಜಾರ್ ನಲ್ಲಿ ‘ಅಭಾರ್ ಡೇ’ ಕಾರ್ಯಕ್ರಮ 

ಉಡುಪಿ: ಬಿಗ್ ಬಜಾರ್ ಮಳಿಗೆಯಲ್ಲಿ ಕೊರೊನಾ ಲಾಕ್ ಡೌನ್ ನಲ್ಲಿ ಸಹಕರಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಇಂದು ‘ಅಭಾರ್ ಡೇ’ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು.

ಉಡುಪಿ ಬಿಗ್ ಬಜಾರ್ ಮುಖ್ಯಸ್ಥ ರಾಘವೇಂದ್ರ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರು ಸಂಸ್ಥೆಗೆ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸರತಿಯಲ್ಲಿ ನಿಂತು ಅಗತ್ಯವಸ್ತುಗಳ ಖರೀದಿ ಮಾಡಿದ್ದಾರೆ. ಸೋಂಕು ಹರಡುವ ಭೀತಿಯ ಮಧ್ಯೆಯೂ ಸಂಸ್ಥೆಯ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಗ್ರಾಹಕರು ಖರೀದಿಸಿದ್ದಾರೆ. ಇದಕ್ಕೆ ಸಂಸ್ಥೆ ಗ್ರಾಹಕರಿಗೆ ಅಭಾರಿ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಉಮೇಶ್ ಆಚಾರ್ಯ ಮಾತನಾಡಿ, ಉಡುಪಿ ಬಿಗ್ ಬಜಾರ್ ಕೇವಲ ವ್ಯವಹಾರಿಕ ಸಂಸ್ಥೆಯಾಗಿ ಗುರುತಿಸಿಕೊಂಡಿಲ್ಲ. ಅದು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದು ಉಡುಪಿಯ ಧಾರ್ಮಿಕ ಕಾರ್ಯಗಳಿಗೂ ತಮ್ಮ ಸಹಕಾರವನ್ನು ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಹಾಗೆ ಲಾಕ್ ಡೌನ್ ಸಂದರ್ಭದಲ್ಲಿ ಬಿಗ್ ಬಜಾರ್ ಗ್ರಾಹಕರಿಗೆ ನೀಡಿದ ಸೇವೆ ಶ್ಲಾಘನೀಯ ಎಂದರು.

ಸಿರಿ ತುಳುವ ಚಾವಡಿ ಒಡಿಪು ಇದರ ಅಧ್ಯಕ್ಷ ಈಶ್ವರ್ ಚಿಟ್ಪಾಡಿ ಮಾತನಾಡಿ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ ಬಿಗ್ ಬಜಾರ್ ಗ್ರಾಹಕರಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯ ಮಾಡಿದೆ. ಅತ್ಯಂತ ಸಂದಿಗ್ಧತೆಯ ಪರಿಸ್ಥಿತಿಯಲ್ಲೂ ಉಡುಪಿ ಬಿಗ್ ಬಜಾರ್ ಸಿಬ್ಬಂದಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ತಮ್ಮ ಸೇವಾ ಬದ್ಧತೆಯನ್ನು ಮೆರೆದಿದ್ದಾರೆ. ಹಾಗಾಗಿ ಗ್ರಾಹಕರು ಬಿಗ್ ಬಜಾರ್ ಗೆ ಅಭಾರಿಯಾಗಬೇಕು ಎಂದು ಹೇಳಿದರು.

ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆಯ ಹಿರಿಯ ಅಕೌಂಟೆಂಟ್ ಮುಕ್ತ ಕಾಮತ್ ಮಾತನಾಡಿ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ ಬಿಗ್ ಬಜಾರ್ ಜನರಿಗೆ ಮಾಡಿರುವ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಮ್ಮಿಯೆ. ಅಗತ್ಯ ವಸ್ತುಗಳನ್ನು ಹೋಮ್ ಡೆಲಿವೆರಿ ಮಾಡುವ ಮೂಲಕ ಅತ್ಯಂತ ಸಂಕಷ್ಟ ಕಾಲದಲ್ಲಿ ಗ್ರಾಹಕರಿಗೆ ಸಹಾಯ ಮಾಡಿದೆ. ನಾನು ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಆಗ ನಾನು ಎಲ್ಲಿಗೂ ಹೋಗುವಂತಿರಲಿಲ್ಲ. ಆಗ ನನ್ನ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಿ ನನ್ನ ಸಂಕಷ್ಟವನ್ನು ನೀಗಿಸಿದೆ. ಇದು ನನ್ನ ಒಬ್ಬಳ ಕಥೆಯಲ್ಲ. ಇಂತಹ ನೂರಾರು ಜನರಿಗೆ ಬಿಗ್ ಬಜಾರ್ ಅಗತ್ಯ ಸಾಮಗ್ರಿಗಳನ್ನು ಪೂರೈಸಿ, ಅವರ ಸಂಕಷ್ಟ ದೂರ ಮಾಡಿದೆ ಎಂದು ಹೇಳಿದರು.

 
 
 
 
 
 
 
 
 
 
 

Leave a Reply