ರಾಮ ಸಂದೇಶ ಕೃತಿ ಲೋಕಾರ್ಪಣೆಗೊಳಿಸಿದ ಪಲಿಮಾರು ಶ್ರೀಗಳು

ಪಲಿಮಾರು ಮಠ ಯತಿ ಪರಂಪರೆಯಲ್ಲಿ ಬಂದ ಪ್ರಾತಃ ಸ್ಮರಣೀಯರೂ ಜ್ಞಾನಿ ಶ್ರೇಷ್ಠರೂ ಆದ ರಾಜರಾಜೇಶ್ವರ ಯತಿಗಳು ಸಂಸ್ಕೃತ ದಲ್ಲಿ ರಚಿಸಿದ ರಾಮಸಂದೇಶ ಕಾವ್ಯಕ್ಕೆ ಕನ್ನಡ ಕಾವ್ಯ ರೂಪದಲ್ಲೇ ಬರೆದ ಭಾವಾರ್ಥ ಕೃತಿಯನ್ನು ಬನ್ನಂಜೆ ಗೋವಿಂದಾಚಾರ್ಯರು ಬರೆದಿದ್ದಾರೆ. ಶುಕ್ರವಾರ ಬನ್ನಂಜೆಯವರ ನಿವಾಸ ಅಂಬಲಪಾಡಿಯ ಈಶಾವಾಸ್ಯಮ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಇದನ್ನು ಲೋಕಾರ್ಪಣೆಗೊಳಿಸಿದರು ‌.

ಈ ಕೃತಿಯನ್ನು ಈಶಾವಾಸ್ಯ ಪ್ರತಿಷ್ಠಾನ ಉಡುಪಿ ಮತ್ತು ದ್ವೈಪಾಯನ ಪ್ರತಿಷ್ಠಾನ ಬೆಂಗಳೂರು ಜಂಟಿಯಾಗಿ  ಪ್ರಕಟಸಿವೆ .

ಅನುಗ್ರಹ ಸಂದೇಶ ನೀಡಿದ ಪಲಿಮಾರು ಶ್ರೀಗಳು ಈ ಕೃತಿಯನ್ನು ಆಚಾರ್ಯರು ಯಾವತ್ತೋ ಪ್ರಕಟಿಸಬೇಕಿತ್ತು .ಅನೇಕ ಬಾರಿ ಅದು ಮುಂದೆ ಹೋಗುತ್ತಲೇ ಇತ್ತು . ಆದರೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಹೊತ್ತಲ್ಲೇ ಅದೂ ಮಧ್ವನವಮೀ ಪರ್ವದಿನದಂದೇ ಅವರ ಮನೆಯಲ್ಲೇ ಬಿಡುಗಡೆಗೊಳ್ಳುತ್ತಿರುವುದು ಯೋಗಾಯೋಗ ಎಂದರು .‌ಬನ್ನಂಜೆಯವರು ತಮ್ಮ ನಿತ್ಯನೂತನವಾದ ಕನ್ನಡ ಕಾವ್ಯದ ಮೂಲಕ ಈ ಕೃತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ . ಈ ಕೃತಿಯ ಮೂಲಕ ರಾಮ ಸಂದೇಶ ಮನೆಮನೆಗೆ ತಲುಪಲಿ . ಬನ್ನಂಜೆಯವರ ಸಮಗ್ರ ಸಾಹಿತ್ಯದ ಕೊಡುಗೆಗಳ ನಿರಂತರ ಪ್ರಕಟಣೆಯ ಕೆಲಸವನ್ನು ಈ ಸಂಸ್ಥೆ ಮಾಡಲಿ ಎಂದು ಆಶಿಸಿದರು .

ವಿದ್ವಾನ್ ಡಾ ರಾಮನಾಥ ಆಚಾರ್ಯ ಕೃತಿ ಪರಿಚಯ ಮಾಡಿ ಈ ಕೃತಿಯಲ್ಲಿ ಬನ್ನಂಜೆಯವರು ವಿಭಿನ್ನ ಛಂದಸ್ಸನ್ನು ಬಳಿಸಿದ್ದು ಕೆಲವೆಡೆ ಹನುಮಂತನ ಬಾಲದಂತೆ ದೀರ್ಘವಾಗಿಯೂ ಕೆಲವೆಡೆ ಹೃಸ್ವವಾಗಿಯೇ ಇದೆ . ಇದು ರಾಮ‌ನ ಕೃತಿಯಾದ್ದರಿಂದ ಇದು ಹನುಮ ಛಂದಸ್ಸು ಎಂದು ಸ್ವತಃ ಬನ್ನಂಜೆಯವರು ಬಣ್ಣಿಸಿದ್ದಾರೆ ಎಂದು ರಾಮನಾಥ ಆಚಾರ್ಯರು ತಿಳಿಸಿದರು .

ದ್ವೈಪಾಯನ ಪ್ರತಿಷ್ಠಾನದ ನರಸಿಂಹಾಚಾರ್ಯ , ಕಡ್ಡಿ ಬದರೀನಾಥ ಆಚಾರ್ಯ ಬನ್ನಂಜೆಯವರ ಪೌತ್ರ ಯಾಸ್ಕ ಆಚಾರ್ಯ ರಮಾ ಆಚಾರ್ಯ ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.ಬನ್ನಂಜೆಯವರ ಪುತ್ರ ವಿನಯಭೂಷಣ ಆಚಾರ್ಯ ಪ್ರಸ್ತಾವನೆಗೈದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .‌ ಸಮಾರಂಭಕ್ಕೂ ಮೊದಲು ಶ್ರೀಗಳವರನ್ನು ಗೌರವದಿಂದ ಬರಮಾಡಿಕೊಂಡು ಗುರುಪೂಜೆಯನ್ನು ಸಲ್ಲಿಸಲಾಯಿತು.

 
 
 
 
 
 
 
 
 
 
 

Leave a Reply